ದೊಡ್ಡರಸಿನಕರೆಯಲ್ಲಿ ದೇಗುಲಕ್ಕೆ ಬೀಗ: ಬಾಗಿಲು ತೆಗೆಯುವಂತೆ ಗೇಟ್​ ಬಳಿಯೇ ನಿಂತ ಪವಾಡ ಬಸಪ್ಪ

doddarasikere basappa
Published on

ಮಂಡ್ಯ: ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಅರ್ಚಕರ ಆಯ್ಕೆ ವಿಚಾರ ಸಂಬಂಧ ಎರಡು ಗುಂಪುಗಳ ನಡುವೆ ಜಟಾಪಟಿ ಶುರುವಾಗಿದ್ದು, ಸಣ್ಣಕ್ಕಿರಾಯಸ್ವಾಮಿ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಸ್ಥಳಕ್ಕೆ ಬಂದ ದೊಡ್ಡರಸಿನಕೆರೆ ಬಸಪ್ಪ, ದೇಗುಲದ ಬಾಗಿಲು ತೆಗೆಯುವಂತೆ ಗೇಟ್ ಬಳಿಯೇ ನಿಂತಿದೆ.

ಗೇಟ್​ ಬಳಿಯೇ 24 ತಾಸಿನಿಂದ ನಿಂತಿರುವ ದೇವರ ಬಸಪ್ಪ, ನೀರು-ಮೇವನ್ನೂ ಸೇವಿಸಿಲ್ಲ. ಗ್ರಾಮಸ್ಥರು ಎಷ್ಟೇ ಮನವೊಲಿಸಿದರೂ ಜಾಗ ಬಿಟ್ಟು ಕದಲುತ್ತಿಲ್ಲ. ದೇಗುಲದ ಬಾಗಿಲು ತೆಗೆಯುವಂತೆ ಕೊಂಬಿನ ಮೂಲಕ ಸೂಚನೆ ಕೊಡುತ್ತಿದ್ದರೂ ಸಂಬಂಧಪಟ್ಟವರು ಮಾತ್ರ ಸುಮ್ಮನಿದ್ದಾರೆ. ಪವಾಡಗಳಿಗೆ ಪ್ರಸಿದ್ಧವಾಗಿರುವ ಬಸಪ್ಪ ದೇಗುಲದ ಗೇಟ್​ ಬಳಿ ತಾಸುಗಟ್ಟಲೆ ನಿಂತರೂ ಬಾಗಿಲು ಓಪನ್​ ಮಾಡಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net