ಹೈದರಾಬಾದ್​ನ ಚಾರ್​ಮಿನಾರ್​ ಬಳಿ 1500 ಮಾಸ್ಕ್​ಗಳನ್ನು ಉಚಿತವಾಗಿ ವಿತರಿಸಿದ ಬೀದರ್​ನ ವೈದ್ಯ; ಕೊರೊನಾ ಬಗ್ಗೆ ಜಾಗೃತಿ

Mask 1
Published on

ಬೀದರ್​: ಕೊರೊನಾ ವೈರಸ್ ವ್ಯಾಪಕವಾಗಿ ಪಸರಿಸುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್​ಗಳ ಬೇಡಿಕೆಯೂ ಹೆಚ್ಚಾಗಿದೆ. ಜನರ ಅಗತ್ಯವನ್ನು ಮನಗಂಡ ವೈದ್ಯರೋರ್ವರು ತೆಲಂಗಾಣದಲ್ಲಿ ಸುಮಾರು 1500 ಮಾಸ್ಕ್​ಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಬೆಂಗಳೂರಿನಿಂದ ತೆಲಂಗಾಣಕ್ಕೆ ಪ್ರಯಾಣ ಮಾಡಿದ್ದ ಟೆಕ್ಕಿಯೋರ್ವನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಅದಾದ ಬೆನ್ನಲ್ಲೇ ಹೈದರಾಬಾದ್​ನಲ್ಲಿ ಮತ್ತೆರಡು ಪ್ರಕರಣಗಳು ಪತ್ತೆಯಾಗಿದ್ದು ಅಲ್ಲಿ ಕೊರೊನಾ ಭೀತಿ ಹೆಚ್ಚಾಗಿ ಆವರಿಸಿದೆ. ಜನರು ಮಾಸ್ಕ್​ಗಳಿಗಾಗಿ ಪರದಾಡುತ್ತಿದ್ದಾರೆ.

ಬೀದರ್​ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ವೈದ್ಯ ಪ್ರಭು ಅವರು ಚಾರ್​ಮಿನಾರ್ ಬಳಿ ಸಾರ್ವಜನಿಕರಿಗೆ ಮಾಸ್ಕ್​ಗಳನ್ನು ಉಚಿತವಾಗಿ ವಿತರಿಸಿದರು. ಅಲ್ಲದೆ, ಕೊರೊನಾ ಸೋಂಕು ತಗುಲುವ, ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು.

ಕೊರೊನಾ ಸೋಂಕಿನಿಂದ ಪಾರಾಗಲು ಮುಂಜಾಗ್ರತೆ ವಹಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್​ಗಳನ್ನು ಹಾಕಿಕೊಂಡೇ ಹೋಗಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net