ಕನ್ನಡ ಸಂವಹನ ಮರೆತ ವೈದ್ಯರು

22 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಗಿ ಮತ್ತು ವೈದ್ಯರ ನಡುವೆ ಸರಿಯಾದ ಸಂವಹನ ಪ್ರಕ್ರಿಯೆ ಆಗದೆ ಇರುವುದರಿಂದ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತವೆ. ಸೂಕ್ತ ಸಮಯದ ಒಳ್ಳೆಯ ಮಾತುಗಳು ರೋಗಿ ಮತ್ತು ವೈದ್ಯರ ನಡುವಿನ ಸಮರವನ್ನು ನಿಷ್ಕ್ರಿಯಗೊಳಿಸುತ್ತವೆ ಎಂದು ಹುಬ್ಬಳ್ಳಿಯ ಅರಿವಳಿಕೆ ತ ಡಾ. ಗೋವಿಂದ ಹೆಗಡೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಸಂದ ಸಂಸ್ಥಾಪಕ ರಾ.ಹ. ದೇಶಪಾಂಡೆ ಜನ್ಮದಿನ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವೈದ್ಯಕಿಯ ವೃತ್ತಿ&ಕನ್ನಡ ಭಾಷೆ ವಿಷಯ ಕುರಿತು ಉಪನ್ಯಾಸ ನೀಡಿದರು.
ವಿದೇಶಗಳಲ್ಲಿ ವೈದ್ಯಕಿಯ ಶಿಣ ಪಡೆದು ಬಂದ ವೈದ್ಯ ಕನ್ನಡ ಶಬ್ದಗಳನ್ನು ಎಷ್ಟರ ಮಟ್ಟಿಗೆ ಬಳಸಬಲ್ಲ?. ಅಷ್ಟೇ ಅಲ್ಲ ಕನ್ನಡ ಮನೆಯಲ್ಲಿಯೇ ಕನ್ನಡ ಕಲಿತು ವೈದ್ಯರಾದ ನಂತರ ಕನ್ನಡ ಸಂವಹನವನ್ನೇ ಮರೆತಿದ್ದಾರೆ. ಹೀಗಾಗಿ ರೋಗಿ ಮತ್ತು ವೈದ್ಯರ ನಡುವೆ ಕಂದಕ ಏರ್ಪಟ್ಟಿದೆ. ಇದು ಹೋಗಬೇಕಾದರೆ ಕನ್ನಡದ ಆಡು ಭಾಷೆಯಲ್ಲಿ ರೋಗಿಯೊಂದಿಗೆ ಸಂವಹನ ನಡೆಯಬೇಕು.
ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕಣಿರ್ ಮಾತನಾಡಿ, ವೈದ್ಯರು ಆಡುವ ವಿವೇಕದ ನುಡಿಗಳು ರೋಗಿಯ ಮೇಲೆ ಆತ್ಮಸ್ಥೆರ್ಯ ಹೆಚ್ಚಿಸುವುದು. ಅಲ್ಲದೆ ವೈದ್ಯರ, ಆಸ್ಪತ್ರೆಗಳ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಬಹುದು. ಭಾಷಾ ಸಂಪತ್ತು, ಭಾಷೆಯ ಕೌಶಲ ವೈದ್ಯರಿಗೆ ಇರುವುದು ಅಗತ್ಯ ಎಂದರು.
ಸಂದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಎಂ.ಎಂ. ಚಿಕ್ಕಮಠ, ಡಾ. ಶಿವಾನಂದ ಟವಳಿ, ಅರುಣ ನಾಡಗೀರ, ಉದಯಚಂದ್ರ ದಿಂಡಿವಾರ, ಸುರೇಶ ಹಿರೇಮಠ, ಜಗದೀಶ ಮೇಳಿ, ಭೀಮಶಿ ಕಟಾವಿ, ಮಾರ್ಕಂಡೇಯ ದೊಡಮನಿ, ಕೆ.ಎಂ. ಅಂಗಡಿ, ಸರೋಜಿನಿ ದೇವಮಾನೆ, ಪ್ರತಿಭಾ ಕುಲಕಣಿರ್, ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net