ಮಾಸ್ಕ್​ ಹಾಕದೆ ಸೂಪರ್​ ಮಾರ್ಕೆಟ್​ಗೆ ಬಂದ ಡಾಕ್ಟರ್​: ಪ್ರಶ್ನಿಸಿದ ಸಿಬ್ಬಂದಿಗೆ ಅವಾಜ್​

mask
Published on

ಮಂಗಳೂರು: ವೈದ್ಯರೊಬ್ಬರು ಸೂಪರ್ ಮಾರ್ಕೆಟ್​ಗೆ ಮಾಸ್ಕ್ ಹಾಕದೆ‌ ಬಂದಿದ್ದು, ಇದನ್ನು ಪ್ರಶ್ನಿಸಿದ ಜನರಿಗೆ ಅವಾಜ್​ ಹಾಕಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಎಂಬುವರು ಸಾಮಗ್ರಿ ಖರೀದಿಸಲು ಮಂಗಳೂರಿನ ಕದ್ರಿಯ ಸೂಪರ್ ಮಾರ್ಕೆಟ್‌ಗೆ ಮಾಸ್ಕ್ ಹಾಕದೆ ಬಂದಿದ್ದರು. ಇದನ್ನು ಪ್ರಶ್ನಿಸಿದ ಸ್ಟೋರ್‌ನ ಸಿಬ್ಬಂದಿ ಮತ್ತು ಇತರರು ಮಾಸ್ಕ್​ ಧರಿಸುವಂತೆ ಸೂಚಿಸಿದರು. ಈ ವೇಳೆ ಗರಂ ಆದ ವೈದ್ಯ, ಪ್ರಶ್ನಿಸಿದವರನ್ನೇ ದಬಾಯಿಸಿದ್ದಾರೆ ಎನ್ನಲಾಗಿದೆ.

ಎಲ್ಲರೂ ಮಾಸ್ಕ್​ ಹಾಕುವಾಗ ನೀವ್ಯಾಕೆ ಹಾಕುತ್ತಿಲ್ಲ? ನಿಮಗೆ ಕರೊನಾ ನಿಯಮ ಅನ್ವಯವಾಗುವುದಿಲ್ಲವೇ? ಎಂದು ಸಿಬ್ಬಂದಿ ಕೇಳಿದ್ದಕ್ಕೆ 'ಫೂಲಿಶ್‌ ಕಾನೂನು' ಎಂದು ವೈದ್ಯ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಾಸ್ಕ್‌ ಹಾಕುವಂತೆ ಎಲ್ಲರಿಗೂ ಮಾರ್ಗದರ್ಶನ ನೀಡಬೇಕಿದ್ದ ವೈದ್ಯರೇ ಈ ರೀತಿ ನಿಯಮ ಉಲ್ಲಂಘಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net