ಮೆಂಟಲ್​ ಆಸ್ಪತ್ರೆಯಲ್ಲಿ ಇರಬೇಕಿದ್ದವರ ಬಗ್ಗೆ ಮಾತಾಡಲ್ಲ: ಸೊಗಡು ಶಿವಣ್ಣಗೆ ಡಿಕೆಶಿ ತಿರುಗೇಟು

dks sogadu shivanna
Published on

ಬೆಂಗಳೂರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಮಾಡಿದ್ದ ಗಂಭೀರ ಆರೋಪಕ್ಕೆ ಡಿಕೆಶಿ ಮಾತಿನಲ್ಲೇ ತಿರುಗೇಟು ಕೊಟ್ಟಿದ್ದಾರೆ.

ಮೊದಲು ಅವರನ್ನ ಮೆಂಟಲ್​ ಆಸ್ಪತ್ರೆಗೆ ಸೇರಿಸಿ. ಯಾವುದಾದರೂ ಆಸ್ತಿ ಇದ್ದರೆ ಅವನೇ ಮಾಡ್ಕೊಳ್ಳಿ. ಅವನಿಗೇ ಅದನ್ನು ಗಿಫ್ಟ್​ ಕೊಟ್ಟು ಬಿಡ್ತೀನಿ. ರಾಜಕೀಯವಾಗಿ ಅವನಿಗೆ ಜಾಗ ಇಲ್ಲ. ಹೀಗಾಗಿ ಮಾತಾಡ್ತಿದ್ದಾನೆ. ಮೆಂಟಲ್​ ಆಸ್ಪತ್ರೆಯಲ್ಲಿ ಇರಬೇಕಾದವರು ಮಾತಾಡ್ತಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ಡಿಕೆಶಿ ಕಿಡಿಕಾರಿದ್ದಾರೆ.

ಸೊಗಡು ಶಿವಣ್ಣ ಏನು ಹೇಳಿದ್ದರು?: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಹೆಸರಲ್ಲಿ ಡಿಕೆಶಿ ಅವರು ಬೇನಾಮಿ ಜಮೀನು ಖರೀದಿ ಮಾಡಿದ್ದಾರೆ ಎಂದು ತುಮಕೂರಲ್ಲಿ ಸೊಗಡು ಶಿವಣ್ಣ ಹೇಳಿದ್ದರು. ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆಗಬೇಕು. ಪಾವಗಡ ಸೋಲಾರ್ ಪಾರ್ಕ್​ನಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಡಿಕೆಶಿ ಅಲಿಬಾಬಾ ಗ್ಯಾಂಗಿನ ಡಕಾಯತಿ. ಈ ಡಾಕಾಯತನಿಗೆ ಇತರ 4೦ ಜನ ಕಳ್ಳರು ಸಪೋರ್ಟ್ ಮಾಡ್ತಿದ್ದಾರೆ ಎಂದು ಸೊಗಡು ಶಿವಣ್ಣ ಲೇವಡಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net