ಸರ್ಕಾರಕ್ಕೆ ಮುಖಭಂಗ

Mahesh Tenginakayi
Published on

ಹುಬ್ಬಳ್ಳಿ : ಆರ್​ಎಸ್​ಎಸ್ ಪಥಸಂಚಲನ ನಿಷೇಧಿಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈ ಕೋರ್ಟ್ ತೀರ್ಪಿನಿಂದ ಮುಖಭಂಗವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದ ರಾಜ್ಯ ಸರ್ಕಾರ ದೇಶಭಕ್ತ ಸಂಘಟನೆ ನಿಷೇದಿಸಲು ಆದೇಶ ಹೊರಡಿಸಿತ್ತು. ಆದರೆ, ಧಾರವಾಡ ಹೈ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ. ಇದರಿಂದ ಸರ್ಕಾರ ಮುಜುಗುರಕ್ಕೆ ಒಳಗಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷದ ಇತಿಹಾಸ ಹೊಂದಿರುವ ಸಂಘಟನೆ. ದೇಶದಾದ್ಯಂತ ಸಂಘದ ಶಾಖೆಗಳು ಇವೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಓಲೈಕೆ ಹೆಚ್ಚಾಗಿದೆ. ಇನ್ನಾದರೂ ಸರ್ಕಾರ ತಾರತಮ್ಯ ತೋರದೇ ಎಚ್ಚೆತ್ತುಕೊಳ್ಳಬೇಕು. ದೇಶಭಕ್ತ ಸಂಘಟನೆಯಾದ ಆರ್​ಎಸ್​ಎಸ್ ನಿಷೇಧಿಸಲು ಹೊರಟರೆ ಆಗುವ ಪರಿಣಾಮಗಳನ್ನು ಅರಿತುಕೊಳ್ಳಬೇಕು. ಹೈ ಕೋರ್ಟ್ ಪೀಠದ ತೀರ್ಪಿನಿಂದ ಸರ್ಕಾರ ಬುದ್ಧಿ ಕಲಿಯಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net