ಅ. ೩೧ರಿಂದ ನ.೩ರವರೆಗೆ ಬಿಂಡಿಗ ದೇವೀರಮ್ಮನವರ ದೀಪೋತ್ಸವ

14 CKM 9
ಚಿಕ್ಕಮಗಳೂರು ತಾಲೂಕಿನ ಬಿಂಡಿಗ ದೇವೀರಮ್ಮ ದೇವಾಲಯ
Published on

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ಆದಿಶಕ್ತಾö್ಯತ್ಮಕ ಶ್ರೀದೇವಿರಮ್ಮನವರ ದೀಪೋತ್ಸವ ಅ. ೩೧ರಿಂದ ನ. ೩ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಕುಲಶೇಖರ್ ತಿಳಿಸಿದ್ದಾರೆ.

ಅ. ೩೧ರಂದು ಬೆಳಗ್ಗೆ ಶ್ರೀದೇವಿರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭ. ರಾತ್ರಿ ೭ ಗಂಟೆಗೆ ದೀಪೋತ್ಸವ, ನ. ೧ರಂದು ಬೆಳಗ್ಗೆ ೯.೩೦ಕ್ಕೆ ದೇವಿರಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ೪ ಗಂಟೆಗೆ ಭಕ್ತಿ-ಭಾವಗೀತೆಗಳ ಕಾರ್ಯಕ್ರಮ, ನಂತರ ಬೆಣ್ಣೆ ಬಟ್ಟೆ ಸುಡುವುದು(ಬೆಣ್ಣೆ ಬಟ್ಟೆ ದೇವಾಲಯದಲ್ಲಿ ದೊರೆಯುತ್ತದೆ), ಮಂಗಳಾರತಿ, ಪ್ರಸಾದ ವಿನಿಯೋಗ ಜರುಗಲಿದೆ ಎಂದು ತಿಳಿಸಿದ್ದಾರೆ.
ನ. ೨ರಂದು ಬೆಳಗ್ಗೆ ೮ ಗಂಟೆಗೆ ದೇವಿರಮ್ಮನವರ ಮಹಾ ಮಂಗಳಾರತಿ, ಪೂಜಾ ಕಾರ್ಯಕ್ರಮಗಳು, ಸಂಜೆ ೫ ಗಂಟೆಗೆ ಭರತನಾಟ್ಯ ಕಾರ್ಯಕ್ರಮ, ರಾತ್ರಿ ಶ್ರೀದೇವಿ ಸನ್ನಿಧಿಯಲ್ಲಿ ಮಹಾ ಗಣಪತಿ ಪೂಜೆ, ಪುಣ್ಯಾಹ, ಅಗ್ನಿ ಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ಇತ್ಯಾದಿಗಳು ನಡೆಯಲಿವೆ ಎಂದಿದ್ದಾರೆ.
ನ. ೩ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾ ಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶ್ರೀಕ್ಷೇತ್ರದಲ್ಲಿ ಪ್ರಸಾದ ವಿನಿಯೋಗಕ್ಕಾಗಿ ಅಕ್ಕಿ, ಬೇಳೆ, ಎಣ್ಣೆ ಹಾಗೂ ದನ ಸಹಾಯ ಮಾಡುವವರು ಶ್ರೀಕ್ಷೇತ್ರಕ್ಕೆ ತಂದು ಒಪ್ಪಿಸಬಹುದಾಗಿದೆ. ಬೆಟ್ಟದಮೇಲೆ ತೆಂಗಿನ ಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಇದೇ ದಿನ ದೇವಿರಮ್ಮನವರ ದೇವಸ್ಥಾನದಲ್ಲಿ ಹಣ್ಣುಕಾಯಿ ಪೂಜೆ ಇರುತ್ತದೆ ಎಂದಿದ್ದಾರೆ.
ಬೆಟ್ಟದಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ಎಸೆಯಬಾರದು. ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತಾಧಿಗಳಿಗಾಗಿ ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪ್ರತೀ ದಿನ ಅನ್ನದಾಸೋಹ ಏರ್ಪಡಿಸಲಾಗಿದೆ. ಅನ್ನದಾಸೋಹ ಮಾಡಿಸುವ ಭಕ್ತರು ದೇವಸ್ಥಾನದ ಕಚೇರಿಯಲ್ಲಿ ಹೆಸರು ನೊಂದಾಯಿಸುವAತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net