

ಇಟ್ಟಮಡು ಗ್ರಾಮ, ತೊರೆದೊಡ್ಡಿ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆಯ ತಡೆಗೋಡೆ ಶಿಥಿಲಾವಸ್ಥೆ ತಲುಪಿರುವುದರಿಂದ ವಾಹನ ಸವಾರರು ಜೀವ ಭಯದಲ್ಲೇ ಸಂಚಾರ ಮಾಡುವಂತಾಗಿದೆ.
ಹೌದು.. ಇಟ್ಟಮಡು ಹಾಗೂ ತೊರೆದೊಡ್ಡಿ ಗ್ರಾಮದ ಮಧ್ಯ ಭಾಗದಲ್ಲಿ ನಲ್ಲಿಗುಡ್ಡೆ ಕೆರೆಯಿಂದ ಬರುವ ನೀರಿನ ಹಳ್ಳಕ್ಕೆ ಬಹಳ ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದೀಗ ಸೇತುವೆಯ ತಡೆಗೋಡೆ ಬೀಳುವ ಹಂತ ತಲುಪಿದೆ.
ತಡೆಗೋಡೆಯಲ್ಲಿ ಬಿರುಕುಸೇತುವೆಯ ಎರಡೂ ಕಡೆ ಕಬ್ಬಿಣದ ಕಂಬಿ ಕಟ್ಟಿ ಅದಕ್ಕೆ ಸಿಮೆಂಟ್ ಹಾಕಲಾಗಿತ್ತು. ಆದರೆ, ಈಗ ಸಿಮೆಂಟ್ ಕಳಚಿದ್ದು ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಜತೆಗೆ ಅಲ್ಲಲ್ಲಿ ಸಿಮೆಂಟ್ ಬಿರುಕು ಬಿಟ್ಟುಕೊಂಡಿದೆ. ಇದರಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಒಂದು ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದರೆ ತಡೆಗೋಡೆ ದಾಟಿ ಕೆಳಗೆ ಬೀಳುವುದು ಖಚಿತ.ಸೇತುವೆ ಮೇಲೆ ಗಿಡಗಂಟಿಸೇತುವೆಯ ಎರಡು ಬದಿಗಳಲ್ಲಿ ಹಾಗೂ ಕೆಳಗಡೆ ಕೂಡ ವಿವಿಧ ಗಿಡ ಗಂಟಿಗಳು ಬೆಳೆದುಕೊಂಡಿವೆ. ಇದರಿಂದ ಸೇತುವೆಯ ತಡೆಗೋಡೆ ಯಾವುದು, ಗಿಡಗಂಟಿ ಯಾವುದು ಎಂದು ಗೋಚರಿಸದ ಸ್ಥಿತಿ ನಿರ್ಮಾಣವಾಗಿದೆ.ಸಂಪರ್ಕ ಸೇತುವೆಇಟ್ಟಮಡು ಗ್ರಾಮದಿಂದ ತೊರೆದೊಡ್ಡಿ, ಹೆಗ್ಗಡಗೆರೆ, ವಡ್ಡರೊದೊಡ್ಡಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಜತೆಗೆ ಕೆಂಪನಹಳ್ಳಿ, ಹೆಗ್ಗಡಗೆರೆ ಹಾದಿಯಾಗಿ ತೊರೆದೊಡ್ಡಿಗೆ ಬಂದು ಅಲ್ಲಿಂದ ಇಟ್ಟಮಡು ಮಾರ್ಗವಾಗಿ ಹಾರೋಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ.
ಇಟ್ಟಮಡು ಗ್ರಾಮದಿಂದ ಕೂಗಳತೆ ದೂರದಲ್ಲಿ ಈ ಸೇತುವೆ ಇದ್ದು, ಬಹಳ ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣವಾಗಿದೆ. ದೊಡ್ಡ ಕೆರೆಯಾಗಿರುವ ನಲ್ಲಿಗುಡ್ಡೆ ಕೆರೆ ಕೋಡಿ ಬಿದ್ದರೆ ನೀರು ಹಳ್ಳದ ಮೂಲಕ ಹರಿದು ಬರುತ್ತದೆ. ಸೇತುವೆ ತಡೆಗೋಡೆಯ ಸಿಮೆಂಟ್ ಕಳಚಿಕೊಳ್ಳುತ್ತಿದೆ. ಹೊಸದಾಗಿ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಜತೆಗೆ ಸೇತುವೆ ಮೇಲೆ ಹಾಗೂ ಕೆಳಗೆ ಗಿಡಗಂಟಿಗಳು ಬೆಳೆದುಕೊಂಡಿದ್ದು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. > ಗೋಪಾಲ್, ಇಟ್ಟಮಡು ಗ್ರಾಮಸ್ಥ