ಧಾರವಾಡ ಕೃಷಿ ವಿವಿಯಲ್ಲಿ ಶಿಕ್ಷಕ-ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ

Dharwad Agricultural University
Published on

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ, ಕೃಷಿ ವಿಭಾಗ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ ತಾತ್ಕಾಲಿಕ ಅವಧಿಗೆ ಶಿಕ್ಷಕರು ಮತ್ತು ಪ್ರಾಧ್ಯಾಪಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಗ ಶಿಕ್ಷಕ-1: ಕನಿಷ್ಠ ಶೇ.55 ಅಂಕದೊಂದಿಗೆ ಎಂಎಸ್ಸಿಯಲ್ಲಿ ಯೋಗ ವಿಷಯವನ್ನು ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಏ.22ರಂದು ಮಧ್ಯಾಹ್ನ 12 ಗಂಟೆಗೆ ಕೃಷಿ ವಿವಿ ಆವರಣದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಸಿಕ ವೇತನ 20,000 ರೂ. ನಿಗದಿಪಡಿಸಲಾಗಿದೆ. ಮುಂಗಡವಾಗಿ ಬಂದ ಅರ್ಜಿಯನ್ನು ಪರಿಗಣಿಸುವುದಿಲ್ಲ. ನೇಮಕಾತಿ ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಂದರ್ಭದಲ್ಲಿ ಕೆಲಸದಿಂದ ತೆಗೆಯುವ ಅಧಿಕಾರ ವಿವಿಗಿದೆ.

ಅಧಿಸೂಚನೆಗೆ: https://bit.ly/3NZ2g7Z

ಸಹಾಯಕ ಪ್ರಾಧ್ಯಾಪಕ-1: ದೈಹಿಕ ಶಿಕ್ಷಣ ವಿಭಾಗದಲ್ಲಿ ಫಿಸಿಕಲ್​ ಎಜುಕೇಷನ್​ ಮತ್ತು ಯೋಗ ತರಬೇತಿ ಬೋಧನೆಗೆ ನೇಮಿಸಿಕೊಳ್ಳಲಾಗುತ್ತಿದ್ದು, ಫಿಸಿಕಲ್​ ಶಿಕ್ಷಣದಲ್ಲಿ ಉನ್ನತ ಪದವಿ ಪಡೆದಿರಬೇಕು. 40ರಿಂದ 45,000 ರೂ. ಮಾಸಿಕ ವೇತನ ನಿಗದಿಯಾಗಿದೆ. ಆಸಕ್ತರು ಏ.18ರಂದು 12.30ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಅಧಿಸೂಚನೆಗೆ: https://bit.ly/35ZgyEm

ಸಹಾಯಕ ಪ್ರಾಧ್ಯಾಪಕ: ಬಿಎಸ್ಸಿ ವಿದ್ಯಾರ್ಥಿಗಳಿಗೆ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದಲ್ಲಿ ಬೋಧಿಸಲು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೃಷಿ ವಿಸ್ತರಣಾ ವಿಷಯದಲ್ಲಿ ಉನ್ನತ ಪದವಿ ಪಡೆದಿರಬೇಕು. 40,000 ದಿಂದ 45,000 ರೂ. ಮಾಸಿಕ ವೇತನ ಇದೆ. ಆಸಕ್ತರು ಏ.18ರಂದು ಬೆಳಗ್ಗೆ 11ಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಅಧಿಸೂಚನೆಗೆ: https://bit.ly/3rfNaRE

ಮಾಹಿತಿಗೆ: https://bit.ly/3E0h41q

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net