

ಕೊಟ್ಟಿಗೆಹಾರ: ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿದ್ದ ಹಾಸನ ತಾಲೂಕು ಶಾಂತಿಗ್ರಾಮದ ಗಂಗಾಧರ (50) ನಾಪತ್ತೆಯಾಗಿದ್ದಾರೆ.
ಫೆ.27ರಂದು ಗ್ರಾಮಸ್ಥರೊಂದಿಗೆ ಪಾದಯಾತ್ರೆ ತೆರಳಿದ್ದ ಗಂಗಾಧರ್ ಕೊಟ್ಟಿಗೆಹಾರದ ನಿಸರ್ಗ ಹೋಟೆಲ್ ಬಳಿ ವಾಸ್ತವ್ಯ ಮಾಡಿದ್ದರು. ಮರುದಿನ ಬೆಳಗ್ಗೆ ಪಾದಯಾತ್ರೆಗೆ ಹೊರಡಲು ಸಿದ್ಧರಾದಾಗ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿದ ಹೋದ ಗಂಗಾಧರ್ ಅರ್ಧ ಗಂಟೆ ಕಳೆದರೂ ಬಂದಿರಲಿಲ್ಲ. ಪಾದಯಾತ್ರಿಗಳ ಓಡಾಟ ಹೆಚ್ಚಿದ್ದರಿಂದ ಅವರ ಜತೆಗೆ ಹೋಗಿರಬಹುದು ಎಂದು ಭಾವಿಸಿ ಊರಿನವರು ಪಾದಯಾತ್ರೆ ಮುಂದುವರಿಸಿದ್ದರು.
ಶಾಂತಿ ಗ್ರಾಮದ ಆನಂದ ಎಂಬಾತ ಪಾದಯಾತ್ರೆ ಮುಗಿಸಿ ಊರಿಗೆ ಬಂದಾಗ ಗಂಗಾಧರ್ ಮನೆಗೂ ಬಾರದೆ ಧರ್ಮಸ್ಥಳಕ್ಕೂ ಹೋಗದೆ ಇರುವುದು ಗೊತ್ತಾಗಿದೆ. ಗಂಗಾಧರನ ಪತ್ನಿ ಜಯಂತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.