ರಾಮನ ದರ್ಶನಕ್ಕಾಗಿ ತಲೆಕೆಳಗಾಗಿ ನಡೆದ ಭಕ್ತ!

23 sgr 5
Published on

ಸಾಗರ: ಪಟ್ಟಣದ ರಾಮನಗರದ ಭಕ್ತ 2.5 ಕಿಮೀ ದೂರ ತಲೆ ಕೆಳಗಾಗಿ ನಡೆದು ಶ್ರೀರಾಮನ ದರ್ಶನ ಪಡೆದ ಅಪರೂಪದ ಸನ್ನಿವೇಶಕ್ಕೆ ನಗರದ ಸೋಮವಾರ ಸಂಜೆ ಸಾಕ್ಷಿಯಾಯಿತು.

ರಾಮ ಭಕ್ತನಾದ ಪ್ರಭು ಎಂಬ ಯುವಕ ರಾಮ ಮಂದಿರ ಪ್ರತಿಷ್ಠಾಪನೆಗೆ ಅಯೋಧ್ಯೆಗೆ ತೆರಳಬೇಕೆಂದು ಮಹಾದಾಸೆ ಇಟ್ಟುಕೊಂಡಿದ್ದ. ಆದರೆ ಬಡತನ, ಆರ್ಥಿಕ ಪರಿಸ್ಥಿತಿಯಿಂದಾಗಿ ಅಯೋಧ್ಯೆಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅತ್ತ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ವೇಳೆ ಇತ್ತ ಪ್ರಭು ರಾಮನಗರದ ಆಂಜನೇಯ ಸ್ವಾಮಿ ದೇವಾಲಯದಿಂದ ನಗರೇಶ್ವರ ದೇವಸ್ಥಾನದ ತನಕ ಕೈ ನಡಿಗೆ (ತಲೆ ಕೆಳಗಾಗಿ)ಯಲ್ಲಿ ಸಾಗಿ ಬಂದು ರಾಮನ ದರ್ಶನವನ್ನು ಪಡೆದ. ಈ ಮೂಲಕ ತನ್ನ ಭಕ್ತಿಯ ಪಾರಕಾಷ್ಟೆಯನ್ನು ಮೆರೆದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net