ವಿದ್ಯಾರ್ಥಿಗಳಲ್ಲಿರಲಿ ಸಾಧಿಸುವ ಛಲ: ಯಶವಂತ ಆಳ್ವ ಅನಿಸಿಕೆ

Gur_Students
Published on

ಗುರುಪುರ: ಸರ್ಕಾರಿ ಶಾಲಾ-ಕಾಲೇಜುಗಳ ಮೇಲೆ ಶಿಕ್ಷಕ ವೃಂದ, ಉಪನ್ಯಾಸಕರು ಮತ್ತು ಶಾಲಾಭಿವೃದ್ಧಿ ಸಮಿತಿ ಇಟ್ಟಿರುವ ಪ್ರೀತಿ ಅನನ್ಯ. ಇದಕ್ಕೆ ಪೂರಕವೆಂಬಂತೆ ನಡೆದುಕೊಂಡಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಮುಂದೆ ಸಮಾಜಕ್ಕೆ ‘ಕೊಡುವ’ ವ್ಯಕ್ತಿಗಳಾಗದಿದ್ದರೂ ‘ಉಪದ್ರವಿ’ಗಳಾಗಬಾರದು. ಸಾಧಿಸುವ ಛಲವಿರಲಿ. ಇಂದು ಬಹುಮಾನ ಸ್ವೀಕರಿಸಿದ ನೀವು ಮುಂದೊಂದು ದಿನ ಇಂಥ ವೇದಿಕೆಗಳಲ್ಲಿ ಬಹುಮಾನ ಕೊಡುವ ಸಾಧಕರಾಗಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ ಆಶಿಸಿದರು.

ಶುಕ್ರವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರುಪುರ ಪಂಚಾಯಿತಿ ಸದಸ್ಯ ಬಾಲಕೃಷ್ಣ ಪೂಜಾರಿ, ಜಿ.ಎಂ.ಉದಯ ಭಟ್, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ರಾಜೇಶ್ ಸುವರ್ಣ, ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಸತ್ಯಾನಂದ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಿ.ಕೆ.ನರಸಿಂಹ ಪೂಜಾರಿ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಗೀತಾ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಸದಸ್ಯೆ ವಿನೋದಾ ಡಿ.ಅಂಚನ್, ವಿದ್ಯಾರ್ಥಿ ನಾಯಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಹಾಗೂ ನಿವೃತ್ತ ಕಿರಿಯ ಆರೋಗ್ಯ ಸಹಾಯಕಿ ಜಲಜಾ ಉಪಸ್ಥಿತರಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕ್ರೀಡೆ ಹಾಗೂ ಇತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪದವಿಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಲೊಯೆಲ್ಲಾ ಸಿಕ್ವೇರ, ಪ್ರೌಢಶಾಲಾ ಪ್ರಭಾರಿ ಮುಖ್ಯಶಿಕ್ಷಕಿ ವೀಣಾ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಆಳ್ವ ವರದಿ ವಾಚಿಸಿದರು.

ಶಿಕ್ಷಕಿ ರಶ್ಮಿ ಸ್ವಾಗತಿಸಿ, ಶಿಕ್ಷಕಿ ರೇಷ್ಮಾ ನಿರೂಪಿಸಿದರು. ಶಿಕ್ಷಕಿ ಸಂಧ್ಯಾರಾಣಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿ ಸಮೂಹಕ್ಕೆ ಹಬ್ಬ. ಇಂದು ಸಂಭ್ರಮಿಸುವ ನೀವು, ಶಿಕ್ಷಣ ಸಾಧನೆಯೊಂದಿಗೆ ಸಂಭ್ರಮಿಸಬೇಕು. ಗುರು ಹಿರಿಯರ ಮೇಲೆ ಭಕ್ತಿಭಾವ ಇರಲಿ. - ಜಲಜಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ https://www.vijayavani.net/tribute-to-the-director-of-state-government-employees-district-association https://www.vijayavani.net/laksha-kumkumarchane-in-bappanad

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net