ಪರಿಪೂರ್ಣವಾಗದ ಸಂವಿಧಾನ ಆಶಯ

16blrp7
ಬೇಲೂರಿನ ಬಿಎಸ್‌ಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಹಾಜರಿದ್ದರು.
Published on

ಬೇಲೂರು: ಸಂವಿಧಾನ ಜಾರಿಯಾಗಿ 74 ವರ್ಷ ಕಳೆದಿದ್ದರೂ ಅದರ ಆಶಯ ಪರಿಪೂರ್ಣವಾಗಿದಿರಲು ಮತದಾರರೇ ಕಾರಣ ಎಂದು ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಹೇಳಿದರು.

ಬಹುಜನ ಸಮಾಜ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 68 ನೇ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಬಿಎಸ್‌ಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜನ ಕಲ್ಯಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಪ್ರಜೆಗಳು ಸ್ವಾತಂತ್ರೃವಾಗಿ ತಮ್ಮ ಹಕ್ಕು ಚಲಾಯಿಸದಂತೆ ಆಸೆ ಆಮಿಷಗಳನ್ನು ತೋರಿಸಿ ಪ್ರಜೆಗಳನ್ನು ಭಿಕ್ಷುಕರನ್ನಾಗಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೋಷಿತ ಸಮುದಾಯ ಸ್ವಾಭಿಮಾನದಿಂದ ಮತ ಚಲಾಯಿಸಿ ಜನಪರ ಸರ್ಕಾರ ತಂದು ಸಂವಿಧಾನ ಸಂಪೂರ್ಣ ಜಾರಿ ಮಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಲು ಕೈ ಜೋಡಿಸಬೇಕು ಎಂದರು.

ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ರಾಜು, ತಾಲೂಕು ಅಧ್ಯಕ್ಷ ಪ್ರಕಾಶ್, ಸಂಯೋಜಕ ಉಮೇಶ್, ಉಪಾಧ್ಯಕ್ಷ ನಿಂಗರಾಜು, ಕಾರ್ಯದರ್ಶಿ ಮಂಜುನಾಥ ಬಿವಿಎಫ್‌ನ ಯೋಗೀಶ್, ಮುಖಂಡರಾದ ನೀಲಾವತಿ, ಕವಿತಾ, ಭಾಗ್ಯಮ್ಮ, ರಂಗನಾಥ್, ಪರಮೇಶ್, ಹೊನ್ನಯ್ಯ, ಕೇಶವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net