ಫೇಸ್‌ಬುಕ್‌ನಲ್ಲಿ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಪೋಸ್ಟ್

FEBRA., 18, HNP., Ph.1.
Published on

ಹೊಳೆನರಸೀಪುರ : ಕೋಮು ಸೌಹಾರ್ದತೆ ಹಾಗೂ ಶಾಂತಿ ಕದಡುವ ಉದ್ದೇಶದಿಂದ ಧರ್ಮಗುರುವಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮುಸ್ಲಿಂ ಒಕ್ಕೂಟದ ಯುವಕರು ನಗರ ಠಾಣೆಯಲ್ಲಿ ದೂರು ದಾಖಲಿಸಿದರು.

ಮದುಗಿರಿ ಮೋದಿ(ಅತುಲ್ ಕುಮಾರ್) ಎಂಬ ವ್ಯಕ್ತಿ ಇಸ್ಲಾಂ ಧರ್ಮದ ಮೂಲ ಪ್ರವಾದಿ ಮೊಹಮ್ಮದ್ ರಸುಲಲ್ಲಾ ಅವರನ್ನು ನಿಂದಿಸಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಫೆ. 16ರಂದು ಪೋಸ್ಟ್ ಮಾಡಿದ್ದಾನೆ. ಇದು ಇಸ್ಲಾಂ ಧರ್ಮಕ್ಕೆ ಧಕ್ಕೆಯನ್ನುಂಟು ಮಾಡಿದೆ. ಆದ್ದರಿಂದ ತಪ್ಪಿತಸ್ಥನ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರೆಹಮಾನ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮಹಮದ್ ಕಾಲೀದ್, ಪುರಸಭಾ ಸದಸ್ಯ ವಾಸಿಂ, ಒಕ್ಕೂಟದ ಮುಕೀಬ್ ಹುಲ್ಲಾ, ಇಲಿಯಾಝ್, ರಾಯಲ್, ಮುಜಾಹಿದ್ ಪಾಷ, ಇಂಬ್ರಾನ್, ಜಾಫರ್ ಶರೀಷ್, ರಿಯಾಝ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net