ನಾಯಕ ಸಮುದಾಯಕ್ಕೆ ಮನ್ನಣೆ ನೀಡಲು ಆಗ್ರಹ

Published on

ಮೈಸೂರು: ಮುಂಬರುವ ಚುನಾವಣೆಗಳಲ್ಲಿ ನಾಯಕ ಸಮುದಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ಮನ್ನಣೆ ನೀಡಬೇಕು ಎಂದು ನಾಯಕ ಮಹಾಸಭಾದ ಮೈಸೂರು ಪ್ರಾಂತ್ಯದ ಸದಸ್ಯ ಸತೀಶ್‌ಬಾಬು ಒತ್ತಾಯಿಸಿದರು.
ಮೈಸೂರು-ಚಾಮರಾಜನಗರ-ಮಂಡ್ಯ-ಹಾಸನ-ಕೊಡಗು ಸೇರಿದ ಮೈಸೂರು ಪ್ರಾಂತ್ಯದಲ್ಲಿ 5 ಲಕ್ಷಕ್ಕೂ ಅಧಿಕ ನಾಯಕ ಸಮಾಜದವರಿದ್ದಾರೆ. ಆದರೆ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಎಚ್.ಡಿ.ಕೋಟೆಯಲ್ಲಿ ಮಾತ್ರ ನಾಯಕ ಸಮಾಜದ ಒಬ್ಬರು ಶಾಸಕರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯ ಪಕ್ಷಗಳು ಕೇವಲ ಚುನಾವಣೆಯಲ್ಲಿ ಸಮುದಾಯದವರನ್ನು ಬಳಸಿಕೊಳ್ಳುತ್ತಿವೆ. ಸಮುದಾಯದ ರಾಜಕೀಯ ಮುಖಂಡರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ನಿಗಮ-ಮಂಡಳಿ ನೇಮಕ ವೇಳೆಯೂ ಇದೇ ನಡೆದಿದೆ. ಈಗಲಾದರೂ ಸೂಕ್ತ ಪ್ರಾತಿನಿಧ್ಯ ನೀಡದಿದ್ದಲ್ಲಿ ಮುಂಬರುವ ಚುನಾವಣೆ ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಮಹಾಸಭಾದ ಮಂಜುನಾಥ್, ಶಿವಮಾದು, ನಟರಾಜ್, ಸುನೀಲ್, ನಾರಾಯಣ ಬದನಗುಪ್ಪೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net