ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿ

13 HANUR 3
ನಾಯಿಗಳ ದಾಳಿಯಿಂದ ಮೃತಪಟ್ಟ ಜಿಂಕೆಯನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಡಾ.ಸಿದ್ದರಾಜು, ನಿರಂಜನ್ ಇತರರು ಇದ್ದರು.
Published on

ಹನೂರು: ಸಮೀಪದ ಕೊತ್ತನೂರು-ಬಾಳಗುಣಸೆ ಮಾರ್ಗದಲ್ಲಿ ಶುಕ್ರವಾರ ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಮೃತಪಟ್ಟಿದೆ.

ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಿಂದ ನೀರನ್ನು ಅರಸಿ ಬಾಳಗುಣಸೆ ಬಳಿಯ ಜಮೀನೊಂದಕ್ಕೆ ಆಗಮಿಸಿದ್ದ ಸುಮಾರು 5 ವರ್ಷದ ಜಿಂಕೆಯನ್ನು ಬೀದಿ ನಾಯಿಗಳು ದಾಳಿ ನಡೆಸಿ ಸಾಯಿಸಿವೆ. ಇದನ್ನು ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆರ್‌ಎಫ್‌ಒ ನಿರಂಜನ್ ಹಾಗೂ ಸಿಬ್ಬಂದಿ ಮೃತ ಜಿಂಕೆಯನ್ನು ಹನೂರು ಪಶು ಆಸ್ಪತ್ರೆಗೆ ಕೊಂಡೊಯ್ದು ವೈದ್ಯ ಡಾ. ಸಿದ್ದರಾಜು ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅದನ್ನು ಹೂಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net