ಕೇಸರಿ ಬಾವುಟಗಳಿಂದ ಸಿಂಗಾರಗೊಂಡ ಪಟ್ಟಣ

19
ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತ, ಸುಭಾಷ್ ವೃತ್ತ, ಪೇಟೆ ಮುಖ್ಯರಸ್ತೆಗಳನ್ನು ಶ್ರೀರಾಮನ ಫ್ಲೆಕ್ಸ್, ಕೇಸರಿ ಬಾವುಟ ಹಾಗೂ ಬಂಟಿಂಗ್‌ಗಳಿಂದ ಸಿಂಗರಿಸಲಾಗಿದೆ.
Published on

ಹೊಳೆನರಸೀಪುರ: ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಟ್ಟಣದ ಗಾಂಧಿವೃತ್ತ, ಸುಭಾಷ್ ವೃತ್ತ, ಪೇಟೆ ಮುಖ್ಯರಸ್ತೆ ಹಾಗೂ ಕೆಲವು ಬಡಾವಣೆಗಳನ್ನು ಶ್ರೀರಾಮನ ಬೃಹತ್ ಫ್ಲೆಕ್ಸ್‌ಗಳು ಹಾಗೂ ಕೇಸರಿ ಬಾವುಟಗಳಿಂದ ಸಿಂಗರಿಸಲಾಗಿದೆ.

ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯಲಿದೆ. ಇತರ ದೇವಸ್ಥಾನಗಳಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಕುರುಹಿನಶೆಟ್ಟಿ ರಾಮ ಮಂದಿರ, ದೇವಾಂಗ ರಾಮಮಂದಿರ, ಕನ್ನಿಕಾ ಪರಮೇಶ್ವರಿ ದೇವಾಲಯಗಳಲ್ಲಿ ಪ್ರತಿಷ್ಠಾಪಣೆಯ ನೇರ ಪ್ರಸಾರವನ್ನು ದೊಡ್ಡ ಪರದೆಯಲ್ಲಿ ತೋರಿಸಲು ಸಿದ್ಧತೆ ನಡೆಸಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net