ಶಿಡ್ಲಘಟ್ಟದಿಂದ ಸ್ಪರ್ಧಿಸುವುದಾಗಿ ಬ್ಯಾಲಹಳ್ಳಿ ಗೋವಿಂದಗೌಡ ನಿರ್ಧಾರ

16 sdlp 01
Published on

ಶಿಡ್ಲಘಟ್ಟ: ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನನ್ನು ೋಷಿಸಿದ ಶಾಸಕ ವಿ.ಮುನಿಯಪ್ಪ ಅವರಿಗೆ ನನ್ನ ಜೀವ ಇರುವವರೆಗೂ ಋಣಿಯಾಗಿರುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂದ ಭಕ್ತರಹಳ್ಳಿ ಶಾಖೆಯ ನವೀಕರಿಸಿದ ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ಗುರುವಾರ ವಾತನಾಡಿ, ನಾನು ಕ್ಷೇತ್ರದ ಶಾಸಕನಾಗಬೇಕು ಎಂದು ಬಯಸಿ ಬಂದವನಲ್ಲ. ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ ಅವರೇ ಮುಂದುವರಿಯಬೇಕು ಎಂದು ಒತ್ತಾಯ ವಾಡಿದವರಲ್ಲಿ ನಾನೂ ಒಬ್ಬ. ವಿ.ಮುನಿಯಪ್ಪ ಅವರು ಅನಾರೋಗ್ಯ ಸಮಸ್ಯೆಯಿಂದ ಕ್ಷೇತ್ರದಿಂದ ಹೊರಗುಳಿಯಲು ಮುಂದಾದಾಗ ಅವರ ಪುತ್ರ ಎಂ.ಶಶಿಧರ್ ಬಳಿ ನಾನು ಹಾಗೂ ಶಾಸಕ ಮುನಿಯಪ್ಪ ತೆರಳಿ ಅಭ್ಯರ್ಥಿಯಾಗಬೇಕು ಎಂದು ಮನವಿ ವಾಡಿದ್ದೆವು. ತಮ್ಮದೇ ಆದ ಹಲವು ಕಾರಣಗಳಿಂದ ನಾನು ಸ್ಪರ್ಧಿಸಲು ಸಾಧ್ಯವಿಲ್ಲ, ನಮ್ಮ ಬದಲಿಗೆ ನೀವೇ ಸ್ಪರ್ಧಿಸಿ ಎಂದು ಮುನಿಯಪ್ಪ ಸೇರಿದಂತೆ ಅವರ ಪುತ್ರ ಶಶಿಧರ್ ನನ್ನನ್ನು ಆಯ್ಕೆ ವಾಡಿ ಅಭ್ಯರ್ಥಿಯಾಗಿ ೋಷಿಸಿದ್ದಾರೆ. ಇದು ನಾನು ಬಯಸದೇ ಬಂದಂತಹ ಭಾಗ್ಯ ಎಂದರು.
ವಿ.ಮುನಿಯಪ್ಪ ಅವರೊಂದಿಗೆ ಕ್ಷೇತ್ರದಾದ್ಯಂತ ಮನೆ ಮನೆ ಭೇಟಿ ನೀಡುವುದೂ ಸೇರಿದಂತೆ ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ಶಮನ ವಾಡಲಾಗುವುದು. ಇನ್ನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ನೆರೆಯ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್ ಅವರನ್ನು ಮುಖಂಡರೊಂದಿಗೆ ಭೇಟಿ ವಾಡಿ ಸಹಕರಿಸುವಂತೆ ಮನವಿ ವಾಡಲಾಗುವುದು ಎಂದರು.
ಶಾಸಕ ವಿ.ಮುನಿಯಪ್ಪ ವಾತನಾಡಿ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ೋಷಿಸಿರುವ ಟನೆ ಯಾರೊಬ್ಬರೂ ಊಹಿಸಿರಲಿಲ್ಲ. ಇದೊಂದು ಸ್ವಪ್ರೇರಣೆಯಿಂದ ಹುಟ್ಟಿದ ವೇದಿಕೆಯಾಗಿದೆ. ಕ್ಷೇತ್ರದ ಒಳಿತು ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಈಗಾಗಲೇ ಆಂತರಿಕ ಚರ್ಚೆ ನಡೆಸಿ ತೆಗೆದುಕೊಂಡ ತೀರ್ವಾನ ಇದಾಗಿದೆ. ನಾಳೆಯಿಂದ ಕ್ಷೇತ್ರದ ವಿವಿಧೆಡೆ ಸಂಚರಿಸಿ ಮುಖಂಡರ ಹಾಗೂ ಕಾರ್ಯಕರ್ತರ ಮುನಿಸು ಶಮನ ವಾಡುವುದೂ ಸೇರಿದಂತೆ ಕಾಂಗ್ರೆಸ್‌ನ ಪ್ರಣಾಳಿಕೆಯ ಬಗ್ಗೆ ಮನವರಿಕೆ ವಾಡಿಕೊಡಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ತಾಲೂಕು ಪಂಚಾಯಿತಿ ವಾಜಿ ಸದಸ್ಯ ರಾಜಣ್ಣ, ಮುಖಂಡರಾದ ಎನ್.ರಾಮಿರೆಡ್ಡಿ, ಮುತ್ತೂರು ಚಂದ್ರೇಗೌಡ, ಮೇಲೂರು ಮಂಜುನಾಥ್, ಮತ್ತಿತರರು ಇದ್ದರು.


ಮನೆ ಮಗನಾಗಿ ಸೇವೆ ಮಾಡುವೆ
ಕಳೆದ ನಲವತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಆರು ಬಾರಿ ಶಾಸಕರಾಗಿ ಅವರು ಗಳಿಸಿರುವ ಹೆಸರಿಗೆ ಚ್ಯುತಿ ಬಾರದಂತೆ ಹಾಗೂ ಕ್ಷೇತ್ರವನ್ನು ಕಟ್ಟಿ ಬೆಳೆಸುವುದು ನನ್ನ ಮುಖ್ಯ ಧ್ಯೇಯ ಆಗಿದೆ. ಈಗಾಗಲೇ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಜನರ ಸೇವೆ ವಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶಿಡ್ಲಟ್ಟ ವಿಧಾನಸಭೆ ಕ್ಷೇತ್ರದ ಮನೆ ಮಗನಾಗಿ ಸೇವೆ ವಾಡಲು ಸಿದ್ಧ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net