

ಸಿದ್ದಾಪುರ: ಪಟ್ಟಣದ ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆ. 31ರಂದು ಅರ್ಥಪೂರ್ಣವಾಗಿ ಆಚರಿಸಲು ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ವನಿಸಲಾಗಿದೆ.
ಸ್ಥಳೀಯ ಮಿನಿ ವಿಧಾನಸೌಧದಿಂದ ವಿವಿಧ ಸ್ತಬ್ದ ಚಿತ್ರಗಳನ್ನು ಒಳಗೊಂಡ ಮೆರವಣಿಗೆ ನಡೆಸಿ ನಂತರ ಬಾಲಭವನದಲ್ಲಿ ಸಭೆ ನಡೆಸಲು ತೀರ್ವನಿಸಲಾಗಿದೆ.
ಬಿಎಸ್ಎನ್ಡಿಪಿ ಸಂಘದ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ, ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಜಿ.ನಾಗರಾಜ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾಯ್ಕ, ಶ್ರೀರಾಮ ಸೇವಾ ಸಮಿತಿ ತಾಲೂಕು ಅಧ್ಯಕ್ಷ ವಿ.ಎನ್.ನಾಯ್ಕ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ವಸಂತ ನಾಯ್ಕ, ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕವಂಚೂರು, ಪಪಂ ಸದಸ್ಯ ರವಿಕುಮಾರ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ಪ್ರಮುಖರಾದ ಕೆ.ಆರ್.ವಿನಾಯಕ, ಸಿ.ಆರ್.ನಾಯ್ಕ, ಪ್ರಶಾಂತ ಅವರಗುಪ್ಪ, ಪಾಂಡುರಂಗ ನಾಯ್ಕ,ದಿನೇಶ ನಾಯ್ಕ,ರವಿಕುಮಾರ ಕೊಠಾರಿ,ಅನಿಲ್ ಕೊಠಾರಿ,ವಾಸು ನಾಯ್ಕ ಇತರರು ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಚರ್ಚೆ ನಡೆಸಿದರು.