ಮಾನವೀಯತೆಯ ಹಾದಿಯಲ್ಲಿ ಅವಧೂತ ಪರಂಪರೆ

rbk 29-2
ಬನಹಟ್ಟಿ ನಗರದ ಜವಳಗಿ ತೋಟದ ಅವಧೂತ ಮಠದಲ್ಲಿ ಜರುಗಿದ ಪರಮಾನಂದ ಅವಧೂತರ ಪುಣ್ಯಾರಾಧನೆಯಲ್ಲಿ ಚಿದಾನಂದ ಅವಧೂತರು ಮಾತನಾಡಿದರು. ಈರಣ್ಣ ಶಿರಹಟ್ಟಿ, ವಿಜಯ ಜವಳಗಿ, ಮಹಾದೇವ ಸ್ವಾಮೀಜಿ, ಮಾಧವಾನಂದ ಸ್ವಾಮೀಜಿ ಇತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಶ್ರೀ ಗುರುದತ್ತ ಮಹಾರಾಜರಿಂದ ಬಂದ ಅವಧೂತ ಪರಂಪರೆ ಉತ್ತಮರಲ್ಲೇ ಅತ್ಯುತ್ತಮವಾಗಿದೆ. ಜಾತಿ, ಮತ, ಬೇಧ-ಭಾವವಿಲ್ಲದೆ ಎಲ್ಲರನ್ನೂ ಮಾನವೀಯತೆಯ ತಳಹದಿಯಲ್ಲಿ ನೋಡಲಾಗುತ್ತದೆ ಎಂದು ಹನಗಂಡಿಯ ಚಿದಾನಂದ ಅವಧೂತರು ಹೇಳಿದರು.

ಬನಹಟ್ಟಿ ನಗರದ ಜವಳಗಿ ತೋಟದ ಅವಧೂತ ಮಠದಲ್ಲಿ ಶನಿವಾರ ನಡೆದ ಪರಮಾನಂದರ ಪುಣ್ಯಾರಾಧನೆಯಲ್ಲಿ ಅವರು ಮಾತನಾಡಿದರು.

ಎಲ್ಲರಲ್ಲಿಯೂ ಭಗವಂತನನ್ನು ಕಾಣುತ್ತಿದ್ದ ಪರಮಾನಂದರು ವಾಸಿಸುವ ಕ್ಷೇತ್ರ ಪುಣ್ಯ ಕ್ಷೇತ್ರವಾಗಿದೆ. ಇಂತಹ ಮಠ, ಮಂದಿರಗಳಲ್ಲಿ ಸೇವಾ ಭಾವನೆಯಿಂದ ಕೆಲಸ ಮಾಡಿದರೆ ಸರ್ವರಿಗೂ ಒಳಿತಾಗುವುದು ಎಂದರು.

ಶರಣ ಈರಣ್ಣ ಶಿರಹಟ್ಟಿ ಮಾತನಾಡಿ, ಸರ್ವವನ್ನೂ ತ್ಯಾಗ ಮಾಡಿ ಸಮಾಜ ಸುಧಾರಣೆಗೆ, ಸಮಾಜದಲ್ಲಿ ಧರ್ಮ ಜಾಗೃತಿಗೆ ಕಾರಣರಾಗಿದ್ದ ಪರಮಾನಂದ ಅವಧೂತರು ತೋರಿದ ಮಾರ್ಗದಲ್ಲಿ ಭಕ್ತರು ಮುನ್ನಡೆಯಬೇಕು ಎಂದರು.

ರಾಂಪೂರದ ಬಸವರಾಜ ಸ್ವಾಮೀಜಿ ಮಾತನಾಡಿ, ತ್ಯಾಗದಿಂದ ನಿಜವಾದ ಸುಖವಿದೆ. ಗುರುವಿಗೆ ಶರಣಾದರೆ ಜನ್ಮ ಪಾವನವಾಗುವುದು ಎಂದರು.

ಬೈಲಹೊಂಗಲ-ಮಹಾಲಿಂಗಪೂರದ ಸಿದ್ಧಾರೂಢಮಠದ ಮಹಾದೇವ ಸ್ವಾಮೀಜಿ, ರಡರಟ್ಟಿಯ ಮಾಧವಾನಂದ ಸ್ವಾಮೀಜಿ, ಯಲಬುರ್ಗಾ-ಕೊಪ್ಪಳ ಬಸವಶ್ರೀ ಆಶ್ರಮದ ಯಶವಂತ ಸ್ವಾಮೀಜಿ, ಜಗದಾಳದ ಚನ್ನಮಲ್ಲಯ್ಯ ಮಠಪತಿ, ಗಣಪತಿ ಗಲಗಲಿ ಶ್ರೀಗಳು, ವಿಜಯ ಜವಳಗಿ, ಈರಣ್ಣ ಬಾಣಕಾರ, ಬಸಪ್ಪ ಮರನೂರ, ಸದಾಶಿವ ನೀಲಕಂಠ, ನಂದೇಶ ಚಿಮ್ಮಡ, ಪರಪ್ಪ ಬುಡ್ಡಾಕರ, ಮಹಾದೇವ ನೀಲಕಂಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net