ಕಡಲ ತೀರದಲ್ಲಿ ತಿಮಿಂಗಿಲ ಮೃತದೇಹ ಪತ್ತೆ

KWR
Published on

ಕಾರವಾರ: ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಶನಿವಾರ ಬೃಹತ್ ನೀಲಿ ತಿಮಿಂಗಿಲದ ಮೃತದೇಹ ಪತ್ತೆಯಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ, ಹೂಳಲಾಯಿತು.

ಕುಂದಾಪುರದಿಂದ ಆಗಮಿಸಿದ ರೀಪ್ ತಂಡದ ಪಶು ವೈದ್ಯರು ತಿಮಿಂಗಿಲದ ದೇಹ ಕೊರೆದು ಪರಿಶೀಲಿಸಿದರು. ಅದರ ಹೊಟ್ಟೆ ಖಾಲಿ ಇರುವುದು ಕಂಡುಬಂದಿದೆ. ವಯೋಸ್ಸಹಜವಾಗಿ ಅಥವಾ ಯಾವುದೋ ಸೋಂಕಿನಿಂದ ಅದು ಮೃತಪಟ್ಟಿರಬಹುದು. ಆದರೆ, ಅದು ಸಂಪೂರ್ಣ ಕೊಳೆತಿರುವುದರಿಂದ ನಿರ್ದಿಷ್ಟ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಕಡಲ ಜೀವ ಶಾಸ್ತ್ರಜ್ಞ ಡಾ. ಶಿವಕುಮಾರ ಹರಗಿ ತಿಳಿಸಿದ್ದಾರೆ. ತಿಮಿಂಗಿಲು 35 ಮೀಟರ್ ಉದ್ದವಿದ್ದರೆ, ಅದು ಪ್ರಾಪ್ತ ಎಂದು ಅಂದಾಜಿಸಬಹುದು. ಅದು ಬ್ರ್ಯಾಡಿ ಜಾತಿಗೆ ಸೇರಿದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net