ನಿಲ್ಲಿಸಿದ್ದ ಲಾರಿಯಲ್ಲಿ ಶವ ಪತ್ತೆ

deadbody
Published on

ಗಂಗೊಳ್ಳಿ: ಮರವಂತೆ ಬೀಚ್ ಸಮೀಪ ನಿಲ್ಲಿಸಲಾಗಿದ್ದ ಲಾರಿಯಲ್ಲಿ ಬುಧವಾರ ಚಾಲಕನ ಶವ ಪತ್ತೆಯಾಗಿದೆ. ಮೃತ ಚಾಲಕನನ್ನು ಆಂಧ್ರಪ್ರದೇಶ ಮೂಲದ ಬಾಬುರಾಯ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ನೋಂದಣಿಯಿದ್ದ ಲಾರಿ ತಾಂತ್ರಿಕ ದೋಷದ ಕಾರಣ ಮರವಂತೆ ಬೀಚ್‌ನ ವರಾಹ ಸ್ವಾಮಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತಿತ್ತು. ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ (ತನಿಖೆ) ಬಸವರಾಜ್ ಕನಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕ್ಲೀನರ್ ಶ್ರೀನಿವಾಸ ಎಂಬುವರನ್ನು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲಕ್ಕೆ ಕೊಂಡೊಯ್ಯಲಾಗಿದ್ದು, ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net