

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕು ಬೆಂಕಿಕೆರೆ ಗ್ರಾಮದ ಕೆರೆಯಲ್ಲಿ ಗುರುವಾರ ಬೆಳಗ್ಗೆ ಬೆಂಗಳೂರು ಮೂಲದ ಯುವಕ-ಯುವತಿಯ ಶವಗಳು ಪತ್ತೆಯಾಗಿವೆ.
ನಾಗರತ್ನ (21) ಮತ್ತು ಚರಣ್ (23) ಮೃತರು. 2 ದಿನಗಳ ಹಿಂದೆ ಅವರು ಕೆರೆಗೆ ಬಿದ್ದಿರುವ ಸಾಧ್ಯತೆಯಿದ್ದು, ಗುರುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಾಗರತ್ನ ಅವರಿಗೆ ಮದುವೆಯಾಗಿದ್ದು, ಅವರ ಪತಿ ಬೆಂಗಳೂರಿನಲ್ಲಿದ್ದಾರೆ. ನಾಗರತ್ನ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪತಿ ದೂರು ನೀಡಿದ್ದರು. ಆದರೆ, ನಾಗರತ್ನ ಮತ್ತು ಚರಣ್ ಶವವಾಗಿ ಇಂದು ಪತ್ತೆಯಾಗಿದ್ದಾರೆ. ಇವರಿಬ್ಬರೂ ಪಲ್ಸರ್ ಬೈಕ್ನಲ್ಲಿ ತುಮಕೂರಿನಿಂದ ಚನ್ನಗಿರಿಗೆ ಬಂದಿದ್ದರು. ರಾತ್ರಿ ವೇಳೆ ಇಬ್ಬರೂ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ತನಿಖೆ ಬಳಿಕ ಮಾಹಿತಿ ಗೊತ್ತಾಗಲಿದೆ.