ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಡಿ ಒಂದು ದಿನದ ಕಾರ್ಯಗಾರ

health
Published on

ಮೈಸೂರು: ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿ.ಎಂ.ಎಸ್.ಎಂ.ಎ) ಕಾರ್ಯಕ್ರಮದಡಿಯಲ್ಲಿ ಫೆ.09 ರಂದು ಬೆಳಗ್ಗೆ 10 ಗಂಟೆಗೆ ಅಗ್ರಹಾರದಲ್ಲಿನ ಹೋಟೆಲ್ ಪ್ರೆಸಿಡೆಂಟ್‌ನಲ್ಲಿ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.

ಕಾರ್ಯಗಾರದಲ್ಲಿ ಗರ್ಭಿಣಿಯರ ಆರೈಕೆ, ಪೌಷ್ಠಿಕ ಆಹಾರ, ವಿಶ್ರಾಂತಿ ಪಡೆಯುವುದು, ಹೆರಿಗೆಯ ಸೂಕ್ತ ನಿರ್ವಹಣೆಯ ಬಗ್ಗೆ, ಹೆರಿಗೆಯ ನಂತರ ಪಾಲಿಸಬೇಕಾದ ಕ್ರಮಗಳು ಹಾಗೂ ಸಮಾಲೋಚನೆಯ ಬಗ್ಗೆ ಸರ್ಕಾರಿ ಮತ್ತು ಖಾಸಗಿ ತಜ್ಞ ವೈದ್ಯರುಗಳಾದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ರೆಡಿಯೋಲಜಿಸ್ಟ್ ಅವರು ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net