

ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ಒಂದು ದಿನ ಮುನ್ನವೇ ಹೂವಿನ ಬೆಲೆ ಗಗನಕ್ಕೇರಿದೆ. ರಜೆ ದಿನವಾದ ಭಾನುವಾರ ದೇವರಾಜ ಮಾರುಕಟ್ಟೆಯು ಗ್ರಾಹಕರಿಂದ ಗಿಜಿಗಿಡುತ್ತಿತ್ತು.
ಕಳೆದ ಎರಡು ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ದುಪ್ಪಟ್ಟಾಗಿದೆ. ಗೌರಿ-ಗಣೇಶ ಹಬ್ಬಕ್ಕೆ ಬೇಕಾದ ಬಾಳೆಕಂಬ, ಡೇರೆ ಹೂವು, ತಾವರೆ ಹೂವಿನ ಬೆಲೆಯೂ ಹೆಚ್ಚಾಗಿದೆ. ಕೆಜಿಗೆ 60 ರೂ. ಇದ್ದ ಏಲಕ್ಕಿ ಬಾಳೆಹಣ್ಣು 90ರಿಂದ 100 ರೂ. ದಾಟಿದೆ. ಹಾಪ್‌ಕಾಮ್ಸ್‌ನಲ್ಲಿ 80 ರೂ.ಗೆ ಸಿಗುತ್ತಿದೆ.
ಸೋಮವಾರ, ಮಂಗಳವಾರ ಪೂಜಾ ಸಾಮಾನು, ಹೂವಿನ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಹಾಗೂ ಮಳೆ ಬಂದರೆ ಖರೀದಿ ಕಷ್ಟವಾಗುತ್ತದೆ ಎಂದು ಇಂದೇ ಹಬ್ಬದ ಸಾಮಾಗ್ರಿಗಳನ್ನು ಖರೀದಿ ಮಾಡಿದೆವು ಎಂದು ಸಾರ್ವಜನಿಕರು ತಿಳಿಸಿದರು.