ತಿರುಪತಿಯಲ್ಲಿ ಅಂಜನಾ ಕಲಾಕೇಂದ್ರದ ನೃತ್ಯ ಪ್ರದರ್ಶನ

DSC_0346 (1)
Published on

ಚಿತ್ರದುರ್ಗ: ತಿರುಪತಿ ತಿರುಮಲದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದಲ್ಲಿ ಚಿತ್ರದುರ್ಗದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಭರತನಾಟ್ಯ ಸೇವೆ ಸಮರ್ಪಿಸಿದರು.

ಬೆಳಗ್ಗೆ ಸೂರ್ಯಪ್ರಭಾ ವಾಹನದ ವೇಳೆ ನವಿಲು ಹಾಗೂ ಗೊಂಬೆ ನೃತ್ಯ ಪ್ರದರ್ಶಿಸಿದರು. ಸಂಜೆ ಚಂದ್ರಪ್ರಭಾ ಉತ್ಸವದಲ್ಲಿ ಶ್ರೀಕೃಷ್ಣ ರಾಸ್ ಹಾಗೂ ಅನ್ನಮಾಚಾರ್ಯರ ಬ್ರಹ್ಮಮೊಕ್ಕಟೆ ಪರಬ್ರಹ್ಮಮೊಕ್ಕಟೇ ಎನ್ನುವ ಕೃತಿಗೆ ಹೆಜ್ಜೆ ಹಾಕಿದರು.

ನೃತ್ಯ ಕಲಾವಿದೆ ವಿದುಷಿ ಡಾ. ನಂದಿನಿ ಶಿವಪ್ರಕಾಶ್ ನೃತ್ಯ ಸಂಯೋಜಿಸಿದ್ದರು ಎಂದು ಕೇಂದ್ರದ ಪ್ರಾಚಾರ್ಯ ವಿದ್ವಾನ್ ಸಿ.ಆರ್. ಶಿವಪ್ರಕಾಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net