ಅತ್ಯಾಚಾರವೆಸಗಿದ, ನಗ್ನಚಿತ್ರ ಸೆರೆ ಹಿಡಿದು ಪದೇಪದೆ ಹಿಂಸಿಸುತ್ತಿದ್ದ... ತಾಯಿ ಬಳಿ ನೋವನ್ನ ಬಿಚ್ಚಿಟ್ಟ ಬಾಲಕಿ

rape-4
Published on

ಮಂಗಳೂರು: ಆಟೋ ಚಾಲಕನೊಬ್ಬ ಅಪ್ರಾಪ್ತ ಬಾಲಕಿ ಜತೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಯ ನಗ್ನಚಿತ್ರವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಹಿಂಸೆ ಕೊಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕ ನೌಫಲ್ ಎಂಬಾತನ ಕಿರುಕುಳ ಸಹಿಸಲಾಗದೆ ತನ್ನ ತಂದೆ-ತಾಯಿ ಬಳಿ ತಾನು ಅನುಭವಿಸಿದ ನರಕಯಾತನೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಮೂರು ವರ್ಷದ ಹಿಂದೆ ಬಾಲಕಿಯ ಮೊಬೈಲ್​ ನಂಬರ್​ ಅನ್ನು ಪಡೆದಿದ್ದ ಅಟೋ ಚಾಲಕ ನೌಫಲ್, ಆಕೆಯನ್ನ ಪುಸಲಾಯಿಸಿ ಕರೆದೊಯ್ದಿದ್ದ. ಬಳಿಕ ಬೆದರಿಸಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದ. ಅಲ್ಲದೆ ಸಂತ್ರಸ್ತೆಯ ನಗ್ನ ಚಿತ್ರಗಳನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಪದೇಪದೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಬೇಸತ್ತ ಸಂತ್ರಸ್ತೆ ತಂದೆ-ತಾಯಿಗೆ ವಿಚಾರ ತಿಳಿಸಿ ಬಳಿಕ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪೋಕ್ಸೋ ಕಾಯ್ದೆಯಡಿ ಆರೋಪಿ ನೌಫಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net