ಸಂಸ್ಕಾರಯುತ ಶಿಕ್ಷಣ ಅಗತ್ಯ

Kin_School Day (1)
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಆಧುನಿಕ ಯುಗದಲ್ಲಿ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ ಎಂದು ಬೆಥನಿ ಶಿಕ್ಷಣ ಸಂಸ್ಥೆ ಪ್ರಾಂತೀಯ ಅಧ್ಯಕ್ಷೆ ಭಗಿನಿ ಲಿಲ್ಲಿ ಪಿರೇರಾ ಬಿ.ಎಸ್. ಹೇಳಿದರು.

ಕಿನ್ನಿಗೋಳಿ ಮೇರಿವೇಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಭಾಂಗಣದಲ್ಲಿ ಆಯೋಜಿಸಿದ ಬಹುಮಾನ ವಿತರಣಾ ಕಾರ್ಯಕ್ರಮ, ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಜೋಯನ್ ಡಿಸೋಜ, ಡಾ.ಶ್ರೀಲಕ್ಷ್ಮೀ ಆರ್., ಮೇರಿವೇಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಪ್ರೇಮ್‌ಲತಾ ಬಿಎಸ್., ಶಾಲಾ ಸಂಚಾಲಕಿ ವ.ಭ.ಮೋರಿನ್ ಬಿ.ಎಸ್., ಶಿಕ್ಷಕ-ರಕ್ಷಕ ಸಂಘ ಉಪಾಧ್ಯಕ್ಷೆ ವೀರಾ ವಾಸ್, ಮುಖ್ಯ ಶಿಕ್ಷಕಿ ಜೆಸಿಂತಾ ಡಿಸೋಜ ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 98.4% ಗಳಿಸಿ ಯಶಸ್ಸು ಕಂಡ ಜೋಸ್ಲಿನ್ ಆಗ್ನೆಸ್ ಡಿಸೋಜ, ದ್ವಿತೀಯ ಸ್ಥಾನ ಪಡೆದ ಹಾನಿಯಾ ಮೆಹ್ತಾಬ್, ಅನನ್ಯಾ ಕೆ., ಅಂತೆಯೇ ಪ್ರತೀ ವಿಷಯದಲ್ಲಿ 100 ಅಂಕ ಗಳಿಸಿದವರನ್ನು ಗೌರವಿಸಲಾಯಿತು.

ಶೈಕ್ಷಣಿಕ ಇಲಾಖಾ ವತಿಯಿಂದ ಏರ್ಪಡಿಸಿದ ಚೆಸ್ ಟೂರ್ನಮೆಂಟ್‌ನಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕ್ರಿಸ್ಸಲ್ ವಾಸ್, ಜಿಲ್ಲಾಮಟ್ಟದ ತ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ 65 ವಿದ್ಯಾರ್ಥಿಗಳಲ್ಲಿ 5ನೇ ಸ್ಥಾನ ಪಡೆದ ಪ್ರಜ್ವಲ್ ಡಿಸೋಜಾ, ಫುಟ್ಬಾಲ್ ಓಪನ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ರಾಷ್ಟ್ರೀಯಮಟ್ಟದ ಫುಟ್ಬಾಲ್ ಓಪನ್ ಚಿಚಿ ಟೂರ್ನಮೆಂಟ್‌ಗೆ ಆಯ್ಕೆಯಾದ ಮಾಸ್ಟರ್ ಡೆನ್ಜಿಲ್‌ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net