ಶ್ರೀ ಕೃಷ್ಣಧಾಮದಲ್ಲಿ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಹಬ್ಬ

MUSIC NEW
Published on


ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ 36ನೇ ಚಾತುರ್ಮಾಸ್ಯದ ಪ್ರಯುಕ್ತ ನಗರದ ಶ್ರೀ ಕೃಷ್ಣಧಾಮದಲ್ಲಿ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ.

ಆ.17 ರಿಂದ ನಡೆಯುತ್ತಿರುವ ಕಾರ್ಯಕ್ರಮ ಆ. 25 ರವರೆಗೆ ಪ್ರತಿದಿನ ಸಂಜೆ 7 ರಿಂದ 8 ಗಂಟೆವರೆಗೆ ಇರಲಿದೆ.


18 ರಂದು ಶ್ರೀದೇವಿ ಮತ್ತು ವಾದಿರಾಜ್ ಜಮದಗ್ನಿ ಅವರಿಂದ ‘ಭಕ್ತಿಭಾವ ಗಾಯನ’, 19 ರಂದು ಐಶ್ವರ್ಯ ದೇಸಾಯಿ ಅವರಿಂದ ‘ದಾಸವಾಣಿ’, 20 ರಂದು ಡಾ.ಕೃಪಾಪಡ್ಕೆ ಶಿಷ್ಯವೃಂದದಿಂದ ‘ಭರತನಾಟ್ಯ’, 21 ರಂದು ಪಂಡಿತ್ ಹೃಷಿಕೇಶ್ ಮಜುಮ್ದಾರ್ ಅವರಿಂದ ‘ಬಾನ್ಸುರಿವಾದನ’, 22 ರಂದು ಆರ್.ಕೆ.ಪದ್ಮನಾಭ್ ಅವರಿಂದ ‘ಶಾಸ್ತ್ರೀಯ ಸಂಗೀತ’, 23 ರಂದು ಡಾ.ಕಿಶೋರಿ ಮತ್ತು ಕಿಶೋರ ಹಂಪಿಹೋಲಿ ಅವರಿಂದ ‘ಶಾಸ್ತ್ರೀಯ ನೃತ್ಯ’, 24 ರಂದು ಶ್ರೀಹರ್ಷ ಅವರಿಂದ ‘ಹರ್ಷಧ್ವನಿ ಭಕ್ತಿಗಾಯನ’ ಹಾಗೂ 25 ರಂದು ಕಾಮಾಕ್ಷಿ ಹಂಪಿಹೋಲಿ ಅವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net