

ಸಿರಿಗೆರೆ: ತರಳಬಾಳು ಸಂಸ್ಥೆಯಲ್ಲಿ ಓದಿದ ಅನೇಕರು ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರುಗಳ ಸಾಧನೆ ನಿಮಗೆ ಪ್ರೇರಣೆ, ಸ್ಫೂರ್ತಿ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ತರಳಬಾಳು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ನಿವೃತ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಪಡುವವರು ಭವಿಷ್ಯದಲ್ಲಿ ಜ್ಞಾನದ ಕಿರೀಟ ಧರಿಸಿದರೆ, ಓದುವಲ್ಲಿ ನಿರ್ಲಕ್ಷೃ ವಹಿಸಿದರೆ ಅಜ್ಞಾನದ ಪಟ್ಟ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಮಠದಲ್ಲಿ ಪುರಾತನ ಕಾಲದಿಂದ ಸಂರಕ್ಷಿಸಲಾದ ತಾಳೆಗರಿಗಳು ಇವೆ. ಅವುಗಳನ್ನು ಡಿಜಿಟಲೈಜೇಷನ್ ಮಾಡಬೇಕೆಂಬ ಹಂಬಲ ಇದೆ. ಹಿರಿಯ ವಿದ್ಯಾರ್ಥಿ ಮೈಸೂರಿನ ಗ್ರಂಥಪಾಲಕಿ ಕಾರ್ಯಗತ ಮಾಡಿಕೊಡಲು ಮುಂದಾಗಿದ್ದಾರೆ ಎಂದರು.
ಬೆಂಗಳೂರು ನಾರಾಯಣ ಆಸ್ಪತ್ರೆ ನರರೋಗ ತಜ್ಞ ಡಾ.ವಿಕ್ರಂ ಹುಡೇದ್ ಮಾತನಾಡಿ, ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜತೆಗೆ ಆರೋಗ್ಯ ವಿಮೆ ಮಾಡಿಸಿದರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಹೇಳಿದರು.
ಬೆಂಗಳೂರು ಇಸ್ರೋ ವಿಜ್ಞಾನಿ ಗೋವಿಂದರಾಜ್ ಶೆಟ್ಟಿ, ಮೈಸೂರಿನ ಡಿಸಿಆರ್‌ಇ ಪೊಲೀಸ್ ಅಧೀಕ್ಷಕೆ ಡಾ.ಬಿ.ಟಿ.ಕವಿತಾ ಮಾತನಾಡಿದರು.
ಡಾ.ಬಿ.ಎಚ್.ಎಂ.ದಾರುಕೇಶ್, ಜಗದೀಶ್ ವಿ.ಸಜ್ಜನರ್, ದಾವಣಗೆರೆಯ ವಿ.ವಿಯ ಪ್ರೊ.ಬಿ.ಸಿ.ಪ್ರಸನ್ನಕುಮಾರ್, ಜೈನ್ ವಿವಿಯ ಡಾ.ಶೋಭಾ ಪಾಟೀಲ್, ದಾವಣಗೆರೆ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಟ್ಟಣಶೆಟ್ಟಿ, ಅರಸೀಕೆರೆ ಹೊಯ್ಸಳೇಶ್ವರ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಸಿ.ಬಸವತಂಪ್ಪ, ಎಂ.ಶಿವಕುಮಾರ್, ನಿವೃತ ಡಿಡಿಪಿಯು ಬಿ.ಎಂ.ರಾಜಕುಮಾರ್, ಬಿ.ವಾಮದೇವಪ್ಪ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ್, ಆಡಳಿತಾಕಾರಿ ಡಾ.ಎಚ್.ವಿ.ವಾಮದೇವಪ್ಪ ಇದ್ದರು.