ನೆಲಕಚ್ಚಿದ ಮುಸುಕಿನ ಜೋಳದ ಬೆಳೆ

ldh crop
Published on

ಲಿಂಗದಹಳ್ಳಿ: ಹೋಬಳಿಯಾದ್ಯಂತ ನಿರಂತರ ಮಳೆಯಾಗಿದ್ದರಿಂದ ಬಟಾಣಿ, ತಿಂಗಳ ಹುರುಳಿ, ಆಲೂಗಡ್ಡೆ ಮುಂತಾದ ಬೆಳೆಗಳು ಕೊಳೆತಿವೆ. ಮುಸುಕಿನ ಜೋಳದ ಬೆಳೆ ತೆನೆಕಟ್ಟುವ ಹಂತದಲ್ಲಿದೆ. ಆದರೆ ನಾಲ್ಕು ದಿನಗಳಿಂದ ಬಿರುಸಾದ ಮಳೆಯಿಂದಾಗಿ ಮುಸುಕಿನ ಜೋಳದ ಬೆಳೆ ನೆಲಕಚ್ಚಿಗೆ. ಹೊಲದಲ್ಲಿ ನೀರು ಸಂಗ್ರಹವಾಗಿರುವುದರಿಂದ ನಾಶವಾಗುವ ಸ್ಥಿತಿ ತಲುಪಿದೆ.

ಕೆಲ ದಿನಗಳಲ್ಲೇ ಮುಸುಕಿನ ಜೋಳ ಕಟಾವಿಗೆ ಬರಲಿತ್ತು. ಬೆಳೆ ಸಂಪೂರ್ಣವಾಗಿ ನೆಲಕಚ್ಚಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ಎಂದು ನಂದಿಬಟ್ಟು ಗ್ರಾಪಂ ಸದಸ್ಯೆ ತುಂಗಾಬಾಯಿ ತಿಳಿಸಿದರು.
ನಂದಿಬಟ್ಟಲು ಸರ್ವೇ ನಂಬರ್ 30ರಲ್ಲಿರುವ ಗಂಗಮ್ಮ, ಲಕ್ಷ್ಮ್ಮಣ ಎಂಬ ರೈತರ 7 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದು, ಮಳೆ ರಭಸಕ್ಕೆ ನೆಲಕ್ಕೆ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net