ಪೊಲೀಸರ ಎದುರೇ ಪಾಗಲ್ ಪ್ರೇಮಿ ಆತ್ಮಹತ್ಯೆ ಯತ್ನ

kote police station
ಶಿವಮೊಗ್ಗ ಕೋಟೆ ಠಾಣೆ
Published on

ಶಿವಮೊಗ್ಗ: ಅಪ್ರಾಪ್ತೆ ಮಗಳನ್ನು ಚುಡಾಯಿಸಿದರೆ ಪೊಲೀಸರಿಗೆ ದೂರು ನೀಡುತ್ತೇವೆಂದು ಹೆದರಿಸಿದ್ದಕ್ಕೆ ಯುವಕನೊಬ್ಬ ಪೊಲೀಸ್ ಠಾಣೆ ಎದುರೇ ಬ್ಲೇಡ್‌ನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆರ್‌ಎಂಎಲ್ ನಗರದ ಯುವಕನೊಬ್ಬ ಕೋಟೆ ಠಾಣೆ ವ್ಯಾಪ್ತಿಯ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಆತನಿಗೆ ಅಪ್ರಾಪ್ತೆಯ ಪಾಲಕರು ಬುದ್ಧಿವಾದ ಹೇಳಿದ್ದರು. ಆದರೂ ಆಕೆಯನ್ನು ಹಿಂಬಾಲಿಸುತ್ತಿದ್ದ. ಇದರಿಂದ ಅಪ್ರಾಪ್ತೆಯ ಪಾಲಕರು ಪೊಲೀಸರಿಗೆ ದೂರು ನೀಡುತ್ತೇವೆಂದು ಹೆದರಿಸಿದ್ದರು.
ಶುಕ್ರವಾರ ರಾತ್ರಿ ಠಾಣೆಗೆ ಪೊಲೀಸರು ಆತನನ್ನೂ ಕರೆಯಿಸಿದ್ದರು. ಈ ವೇಳೆ ಬ್ಲೇಡ್‌ನಿಂದ ಆತ ಕೈಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಬಳಿಕ ಆತನನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿದ್ದು ಕಾಂಪೌಂಡ್ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಕೋಟೆ ಠಾಣೆಯಲ್ಲಿ ಸುಮೋಟೊ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net