ಹಸುವಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು! ಹಿಂದು ಕಾರ್ಯಕರ್ತನ ಎದೆಗೆ ಕೋವಿ ಇಟ್ಟು ಪರಾರಿ

cow-slaughter-ban-bill-pass
Published on

ಮಡಿಕೇರಿ: ಗೋವನ್ನು ಸಾಕ್ಷಾತ್​ ದೇವರೆಂದು ಪೂಜಿಸುವ ನಾಡಿನಲ್ಲಿ ದುಷ್ಕರ್ಮಿಗಳು ರಾತ್ರೋರಾತ್ರಿ ಹಸುವಿಗೆ ಗುಂಡಿಕ್ಕಿ ಕೊಂದಿದ್ದಾರೆ.

ಇಂತಹ ಅಮಾನವೀಯ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ವಿಷಯ ತಿಳಿದು ಹಿಂದು ಜಾಗರಣ ವೇದಿಕೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ತಂಡದ ಮುಂಚೂಣಿ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿದ ದುಷ್ಕರ್ಮಿಗಳು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕಾಗಮಿಸಿ, ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ ಕೂಡ ಇದೇ ಗ್ರಾಮದಲ್ಲಿ ದುಷ್ಕರ್ಮಿಗಳು ಗೋವಿಗೆ ಗುಂಡಿಕ್ಕಿ ಮಾಂಸ ಮಾಡಿ ಕೊಂಡೊಯ್ದಿದ್ದರು.

ಈ ಪ್ರಕರಣ ಸಂಬಂಧ ಬುಧವಾರ ಹಿಂದೂ ಜಾಗರಣ ವೇದಿಕೆಯ ತುರ್ತು ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net