

ಜಮಖಂಡಿ: ತಾಲೂಕಿನ ಸನಾಳ-ಲಿಂಗದಕಟ್ಟೆ ವ್ಯಾಪ್ತಿಯ ಶ್ರೀಶೈಲ ನ್ಯಾಮಗೌಡ ಅವರ ಆಕಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತಾಲೂಕಿನ ರೈತಾಪಿ ಜನರಲ್ಲಿ ಆತಂಕವೂ ಹೆಚ್ಚಿಸಿದೆ.
ಕಳೆದ ಜನವರಿ ತಿಂಗಳಿನಲ್ಲಿ ತಾಲೂಕಿನ ಕುಂಚನೂರ ಗ್ರಾಮದಲ್ಲಿ ಹಸು, ಕರು, ನಾಯಿಗಳ ಮೇಲೆ ಚಿರತೆ ದಾಳಿ ಮಾಸುವ ಮುನ್ನವೆ ಮತ್ತೆ ಚಿರತೆ ದಾಳಿಗೆ ಆಕಳು ಬಲಿಯಾಗಿದ್ದು ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಕುಂಚನೂರ ಗ್ರಾಮದಲ್ಲಿ ಸ್ಥಳೀಯ ರೈತರೊಬ್ಬರು ಟ್ರಾೃಕ್ಟರ್ ಚಲಾಯಿಸಿಕೊಂಡು ತೆರಳುತಿದ್ದ ವೇಳೆ ಚಿರತೆ ರಸ್ತೆ ದಾಟುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದರು. ಈ ಕುರಿತು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದ್ದು, ಚಿರತೆ ಸೆರೆಹಿಡಿಯಲು ಬೋನ್‌ಗಳನ್ನು ಅಳವಡಿಸಿದ್ದರು ಇಲ್ಲಿಯರೆಗೂ ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಗುಡ್ಡಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮದ ಜಮೀನಗಳಲ್ಲಿನ ರೈತರಲ್ಲಿ ಆತಂಕ ಮನೆ ಮಾಡಿದ್ದು, ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ಚಿರತೆ ಹೆಜ್ಜೆ ಗುರುತು ಆಧರಿಸಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕ್ಯಾಮರಾ ಹಾಗೂ ಬೋನ್ ಅಳವಡಿಸಿ ಕಾರ್ಯಚರಣೆ ನಡೆಸುತಿದ್ದಾರೆ.
ಘಟನಾ ಸ್ಥಳಕ್ಕೆ ಡೆಪ್ಯೂಟಿ ಆರ್‌ಎ್ಓ ಎಚ್.ವೈ.ಹೂಗಾರ, ಮಹೇಶ ಗುಡಿಮನಿ, ಆರ್.ಪಿ.ಮೇತ್ರಿ, ಸಿದ್ದು ಕುಳಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.