ಚಿರತೆ ದಾಳಿಗೆ ಆಕಳು, ನಾಯಿ ಬಲಿ

Published on

ಯಲ್ಲಾಪುರ: ತಾಲೂಕಿನಾದ್ಯಂತ ಇತ್ತೀಚೆಗೆ ಹುಲಿ, ಚಿರತೆ, ಕರಡಿ, ಕಾಡುಹಂದಿ ಹಾಗೂ ಆನೆಗಳ ಕಾಟ ಮಿತಿಮೀರುತ್ತಿದ್ದು, ಗ್ರಾಮಾಂತರ ಪ್ರದೇಶದ ಜನತೆ ಆತಂಕಗೊಳ್ಳುವಂತಾಗಿದೆ.

ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ಹಲಸಿನಕೊಪ್ಪದ ನಿವಾಸಿ ಮಂಜಿ ದೇವಾಡಿಗ ಅವರ ಆಕಳೊಂದು ಚಿರತೆ ದಾಳಿಗೆ ಬಲಿಯಾಗಿದೆ. ಅನಂತ ಶೆಟ್ಟರ ಮನೆಯ ಸಾಕು ನಾಯಿಯನ್ನೂ ಇದೇ ಚಿರತೆ ಹೊತ್ತೊಯ್ದ ಘಟನೆಯೂ ನಡೆದಿದೆ.

ಸಂಜೆಯಾದೊಡನೆ ಗ್ರಾಮೀಣ ಪ್ರದೇಶದ ಜನರು ಯಾವುದೇ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಹಲಸಿನಕೊಪ್ಪದ ಘಟನೆಗೆ ಸಂಬಂಧಿಸಿದಂತೆ ವಿಷಯ ತಿಳಿದ ಮಂಚೀಕೇರಿ ವಲಯದ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.</p><p></p>

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net