ಭಿನ್ನಾಭಿಪ್ರಾಯ ಮರೆತು ಒಂದಾದ ದಂಪತಿ

Published on

ಶಿರಾ: ನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್​ ಲೋಕ ಅದಾಲತ್​ ಕಾರ್ಯಕ್ರಮದಲ್ಲಿ ವಿವಿಧ ರಾಜಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ವಿವಾಹ ವಿಚ್ಚೇದನ ಪ್ರಕರಣಗಳ ಪೈಕಿ ಬಾಲಕೃಷ್ಣಗೌಡ ಮತ್ತು ರಂಜಿತಾ ಹಾಗೂ ತಿಪ್ಪೇಸ್ವಾಮಿ ಮತ್ತು ಚಂದ್ರಕಲಾ ದಂಪತಿಗಳ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಹಿರಿಯ ಸಿವಿಲ್​ ನ್ಯಾಯಾಧೀಶೆ ಗೀತಾಂಜಲಿ ಮತ್ತು ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ನರಸಿಂಹಮೂರ್ತಿ ಸಮ್ಮುಖದಲ್ಲಿ ರಾಜಿ ಮಾಡಲಾಯಿತು. ಕಳೆದ 10 ವರ್ಷಗಳಿಂದ ವಕೀಲ ಜಗದೀಶ್​ ನಡೆಸುತ್ತಿದ್ದ ಗಂಗಮ್ಮ, ರಂಗಧಾಮಯ್ಯ ಮತ್ತು ಇತರ ಕುಟುಂಬಗಳ ವ್ಯಾಜ್ಯ ಪ್ರಕರಣ ಸೇರಿದಂತೆ ಅನೇಕ ಬ್ಯಾಂಕ್​ ಮತ್ತು ಮೋಟಾರ್​ ವಾಹನ ಕಾಯ್ದೆಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಧರಣೇಶ್​ಗೌಡ, ಕಾರ್ಯದರ್ಶಿ ಎಚ್​.ಗುರುಮೂರ್ತಿಗೌಡ, ವಾಜಿದ್​ ಅಹಮದ್​, ಉಮೇಶ್​, ಭೂಪತಿ ಗೌಡ , ರಘು ಮಂಜುನಾಥ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net