

ಲಕ್ಷೆ್ಮೕಶ್ವರ: ಪಟ್ಟಣದ ಹಿರಿಯ ದಿವಾಣಿ, ಜೆಎಂಎಫ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 30 ಸಿವಿಲ್ ಪ್ರಕರಣ, 320 ಕ್ರಿಮಿನಲ್ ಪ್ರಕರಣ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳೆಂದು ಪರಿಗಣಿಸಿದ ಬ್ಯಾಂಕ್ನಿಂದ ಸಲ್ಲಿಕೆಯಾದ 50ಕ್ಕೂ ಹೆಚ್ಚು ಕೇಸ್ಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಯನ್ನು ನ್ಯಾಯಾಧೀಶರಾದ ಭರತ್ ಯೋಗೀಶ ಕರಗುದರಿ, ಸಂಧಾನಕಾರರಾದ ಮಹೇಶ ಡಿ.ಆರ್. ಹಾಗೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರ ಪರ ವಕೀಲ ಬಿ.ಎಸ್. ಪಾಟೀಲ, ಆರ್.ಎಂ. ಕುರಿ ಅವರಿಗೆ ತಿಳಿ ಹೇಳಿ ಅವರ ವೈವಾಹಿಕ ಜೀವನ ಸರಿಪಡಿಸಿ ಉತ್ತಮ ಬದುಕು ನಡೆಸುವಂತೆ ಸಲಹೆ ನೀಡಲಾಯಿತು. ಒಂದಾದ ದಂಪತಿಗಳು ಪರಸ್ಪರ ಮಾಲೆ ಬದಲಾಯಿಸಿಕೊಂಡು, ಸಿಹಿ ಹಂಚಿದರು.
ಸಹಾಯಕ ಅಭಿಯೋಜಕ ಹೀನಾಕೌಸರ ಗಂಜಿಹಾಳ, ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಪಾಟೀಲ, ಎಸ್.ಸಿ. ನರಸಮ್ಮನವರ, ಎನ್.ಐ. ಬೆಲ್ಲದ, ಎ.ಟಿ. ಕಟ್ಟಿಮನಿ, ವಿ.ಕೆ. ನಾಯಕ, ನೀಲಪ್ಪ ಕೋರಣ್ಣವರ, ಮೃತ್ಯುಂಜಯ ಯಲವಗಿ, ಇತರರಿದ್ದರು.