

ಹುಬ್ಬಳ್ಳಿ: ಸಾವಿನಲ್ಲೂ ದಂಪತಿ ಒಂದಾದ ಘಟನೆ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಆಧ್ಯಾತ್ಮಿಕ ಜೀವಿಗಳಾದ ಗುರುಸಿದ್ದಪ್ಪ ಗಂಡೂಡಿ (70), ದೇವಕ್ಕ ಗಂಡೂಡಿ (65) ಮೃತ ದಂಪತಿ. ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಶನಿವಾರ ಬೆಳಗ್ಗೆ 6ರ ಸುಮಾರಿಗೆ ಪತಿ ಗುರುಸಿದ್ದಪ್ಪ ಗಂಡೂಡಿ ಮೃತಪಟ್ಟರೆ, 6.15ರ ಸುಮಾರಿಗೆ ಪತ್ನಿ ದೇವಕ್ಕ ಗಂಡೂಡಿ ಮೃತಪಟ್ಟಿದ್ದಾರೆ.
ದೇವಕ್ಕ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರೇ ಮೊದಲು ತೀರಿಕೊಳ್ಳುತ್ತಾರೆ ಎಂದು ತಿಳಿದು ಸ್ವಂತ ಮನೆಗೆ ಕರೆ ತರಲಾಗಿತ್ತು. ಅಲ್ಲಿಯೇ ವೈದ್ಯೋಪಚಾರ ನಡೆಸಲಾಗಿತ್ತು. ಬಂಧು-ಬಳಗವೆಲ್ಲ ಆಗಮಿಸಿತ್ತು. ಆದರೆ, ಪತ್ನಿಗಿಂತ ಮೊದಲು ಗುರುಸಿದ್ದಪ್ಪ ಅವರು ತೀರಿಕೊಂಡಿದ್ದರು. ನಂತರ ಪತ್ನಿ ದೇವಕ್ಕ ತೀರಿಕೊಂಡಿದ್ದು ಗ್ರಾಮಸ್ಥರ ಕಣ್ಣಾಲಿಗಳು ತೇವಗೊಂಡಿದ್ದವು.