

ವಿಜಯವಾಣಿ ಸುದ್ದಿಜಾಲ ಧಾರವಾಡ
ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಸಾವಿನಲ್ಲೂ ಒಂದಾಗಿದ್ದಾರೆ. ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿ ಈಶ್ವರ ಆರೇರ (82) ಹಾಗೂ ಪತ್ನಿ ಪಾರವ್ವ ಆರೇರ (73) ಸೋಮವಾರ ಬೆಳಗಿನ ಜಾವ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ನಾಲ್ವರು ಪುತ್ರಿಯರು, ಬಂಧುಗಳಿದ್ದಾರೆ. ಪಾರವ್ವ ಕೆಲ ತಿಂಗಳಿ0ದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಇಬ್ಬರೇ ಇರುತ್ತಿದ್ದ ದಂಪತಿ ಭಾನುವಾರ ರಾತ್ರಿ ಊಟ ಮಾಡಿ ಮಲಗಿದವರು ಬೆಳಕಾಗುವಷ್ಟರಲ್ಲಿ ಮೃತಪಟ್ಟಿದ್ದರು. ಅಕ್ಕಪಕ್ಕದವರು ಬೆಳಗ್ಗೆ ಮನೆ ಬಾಗಿಲು ತೆರೆದು ನೋಡಿದಾಗ ವಿಷಯ ಗೊತ್ತಾಗಿದೆ. ಸಾವಿನಲ್ಲಿ ಒಂದಾದ ದಂಪತಿಯ ಅಂತ್ಯಸAಸ್ಕಾರವನ್ನು ಸಂಬAಽಕರು ಮತ್ತು ಗ್ರಾಮಸ್ಥರು ಸೋಮವಾರ ಸಂಜೆ ನೆರವೇರಿಸಿದರು.