ಸಾವಿನಲ್ಲೂ ಒಂದಾದ ದಂಪತಿ

h23-kusugal
Published on

ಹುಬ್ಬಳ್ಳಿ: ಸಂಸಾರದ ಸುಖ-ದುಃಖದಲ್ಲೂ ಒಂದಾಗಿದ್ದ ದಂಪತಿ ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಶಂಕರಪ್ಪ ಹೊಂಬಳ (72) ಸೋಮವಾರ ಬೆಳಗ್ಗೆ 6ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿಯ ಸಾವಿನ ಸುದ್ದಿ ತಿಳಿದ ಕೆಲವೇ ಗಂಟೆಗಲ್ಲಿ ಪತ್ನಿ ಅನ್ನಪೂರ್ಣ ಹೊಂಬಳ (62) ಕೂಡ ಕುಸಿದುಬಿದ್ದು ನಿಧನರಾಗಿದ್ದಾರೆ. 44 ವರ್ಷದ ವೈವಾಹಿಕ ಜೀವನದಲ್ಲಿ ಮಿಂದಿದ್ದೆ ದಂಪತಿಯ ಒಂದೇ ದಿನದಲ್ಲಿ ಸಾವು ಕಂಡಿರುವುದು ಗ್ರಾಮಸ್ಥರ ಕಂಗಳಲ್ಲಿ ನೀರು ತುಂಬಿವೆ.
ಬೆಳಗ್ಗೆಯಿಂದ ಸಂಜೆ ಅಂತ್ಯಸಂಸ್ಕಾರದವರೆಗೂ ಗ್ರಾಮ ಸೇರಿ ಇತರೆಡೆಯೂ ಇದೇ ಚರ್ಚೆ. ಯಾವುದೇ ಜಗಳವಾಡದೆ ಜೀವನ ನಡೆಸುತ್ತಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವುದನ್ನು ಕಂಡು ಜನರು ಮಮ್ಮಲ ಮರುಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net