ವಿಜಯಪುರ : ಸಾವಿನಲ್ಲೂ ಒಂದಾದ ದಂಪತಿ

WhatsApp Image 2022-09-03 at 3.31.18 PM
Published on

ವಿಜಯಪುರ: ಸಾವಿನಲ್ಲೂ ದಂಪತಿ ಒಂದಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶತಾಯುಷಿ ದೇವೇಂದ್ರ ಶ್ಯಾಮರಾಯ ವಳಸಂಗ್ (೧೦೫) ಇಂದು ನಸುಕಿನ ಜಾವ ಮೃತಪಟ್ಟಿದ್ದರು.‌ ಇನ್ನೂ ಗಂಡನ ಸಾವಿನಿಂದ ಆಘಾತಕ್ಕೆ ಒಳಗಾಗಿ ಪತ್ನಿ ದುಂಡವ್ವ (೮೭) ಸಹ ಮೃತಪಟ್ಟಿದ್ದಾರೆ. ಇಬ್ಬರು ಹಿರಿಯನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮನೆ ಮಾಡಿದೆ. ಮಲಕನದೇವರಹಟ್ಟಿ ಗ್ರಾಮದಲ್ಲಿ ದಂಪತಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net