ಗುಡ್ಡದಲ್ಲಿ ಬೆಂಕಿ ನಂದಿಸಲೆತ್ನಿಸಿದ ದಂಪತಿ ಸಜೀವ ದಹನ: ಬಂಟ್ವಾಳದ ಅಮ್ಟಾಡಿಯಲ್ಲಿ ಘಟನೆ

Fire
ದಂಪತಿ ಸುಟ್ಟು ಕರಕಲಾದ ಸ್ಥಳ.
Published on

ಬಂಟ್ವಾಳ: ಬೆಂಕಿಗೆ ಸಿಲುಕಿ ದಂಪತಿ ಸುಟ್ಟು ಮೃತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಡುಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬರ್ಟ್ ಕಾರ್ಲೋ(78) ಹಾಗೂ ಕ್ರಿಸ್ಟಿನಾ ಕಾರ್ಲೋ(70) ಮೃತರು.

ಮನೆಯ ಪಕ್ಕ ಕಸಕಡ್ಡಿಗೆ ಹಾಕಿದ ಬೆಂಕಿ ವ್ಯಾಪಿಸಿ ಮನೆ ಸಮೀಪದ ಕಾಡನ್ನು ಆವರಿಸಿದ ವೇಳೆ ಅದನ್ನು ನಂದಿಸಲು ತೆರಳಿದ ವೃದ್ದ ದಂಪತಿಗಳು ಬೆಂಕಿಗೆ ಸಿಕ್ಕಿ ಸುಟ್ಟು ಹೋಗಿದ್ದಾರೆ. ಮೃತರಿಗೆ ಮೂವರು ಮಕ್ಕಳಿದ್ದು, ಇಬ್ಬರು ವಿದೇಶದಲ್ಲಿ ಇನ್ನೊಬ್ಬಾಕೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net