ಅಪಘಾತದಲ್ಲಿ ದಂಪತಿ ಮೃತ

Published on

ಹುಳಿಯಾರು: ಸಮೀಪದ ಮತಿಟ್ಟ ಬಳಿಯ ಸಾಲುಮರಪಾಳ್ಯ ಗೇಟ್​ನಲ್ಲಿ ಭಾನುವಾರ ಬೈಕ್​ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭರಣಾಪುರ ಗ್ರಾಮದ ಗೋಪಿನಾಥ್​(45) ಹಾಗೂ ಅವರ ಪತ್ನು ಪುಷ್ಪಾವತಿ(40) ಮೃತರು. ಮತಿಟ್ಟ ಗ್ರಾಮಕ್ಕೆ ಬಂದು ವಾಪಸ್​ ಗ್ರಾಮಕ್ಕೆ ಮರಳುತ್ತಿರುವಾಗ ಟನೆ ಸಂಭವಿಸಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net