ವಿವಿಧತೆಯಲ್ಲಿ ಏಕತೆ ಕಾಣುವ ದೇಶ

UNITY
Published on

ಲಕ್ಷ್ಮೇಶ್ವರ: ಸಂವಿಧಾನವನ್ನು ಗೌರವಿಸುವ ಮತ್ತು ವಿಶ್ವದಲ್ಲಿ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ದೇಶ ಭಾರತ. ಈ ಸಂವಿಧಾನದ ಪೀಠಿಕೆಯನ್ನು ಇಂದು ಸಾಮೂಹಿಕವಾಗಿ ಓದುವ ಮೂಲಕ ನಮಗೆ ನಾವೇ ಅರ್ಪಿಸಿಕೊಂಡಿರುತ್ತೇವೆ ಎಂದು ತಹಸೀಲ್ದಾರ್ ಆನಂದಶೀಲ ಹೇಳಿದರು.

ಪಟ್ಟಣದ ಉಮಾವಿದ್ಯಾಲಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಭಾರತದ ಸಂವಿಧಾನ ಪೀಠಿಕೆಯಲ್ಲಿ ಸಂವಿಧಾನದ ಎಲ್ಲ ಅಂಶಗಳನ್ನು ಒಳಗೊಂಡಿದ್ದು ಭಾರತವು ಜಾತಿ ಧರ್ಮಗಳ ಎಲ್ಲೆಯನ್ನು ಮೀರಿದ ದೇಶವಾಗಿದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದೆ’ ಎಂದರು.

ಸಿಆರ್‌ಪಿ ಸತೀಶ ಬೋಮಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ, ಬಿಆರ್‌ಪಿ ಈಶ್ವರ ಮೆಡ್ಲೇರಿ, ಎಸ್‌ಇಸಿಒ ಹರೀಶ ಎಸ್, ಪುರಸಭೆ ಸದಸ್ಯರಾದ ಅಶ್ವಿನಿ ಅಂಕಲಕೋಟಿ. ಎಸ್.ಕೆ.ಹವಾಲ್ದಾರ, ಮಹಾದೇವಪ್ಪ ಅಣ್ಣಿಗೇರಿ, ಅಂಬರೇಶ ತೆಂಬದಮನಿ, ರಾಜು ಓಲೇಕಾರ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪಿ.ಕುಲಕರ್ಣಿ, ಮುತ್ತಣ್ಣ ಸಂಕನೂರ, ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net