

ಸಿಂದಗಿ: ಪ್ರತಿಯೊಬ್ಬರು ಶಿಕ್ಷಣ ಕಲೆಯಬೇಕು. ಶಿಕ್ಷಣ ಕಲಿತರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಭಾನುವಾರ ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿಯಡಿ ಶಾಲಾ ಕಟ್ಟಡ ದುರಸ್ತಿಗೆ 9ಲಕ್ಷ ರೂ. ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಡಿ 50ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಜು. 10ರಂದು ಶಾಲಾ ವಿದ್ಯಾರ್ಥಿಗಳು ಶಾಲಾ ಕಟ್ಟಡ ದುರಸ್ತಿಗಾಗಿ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಬೇಡಿಕೆಗೆ ಸಂಬಂಧಿಸಿದಂತೆ 9ಲಕ್ಷ ರೂ.ಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ, ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಗ್ರಾಮದ ಸಂಗಪ್ಪ ಚಾಗಶೆಟ್ಟಿ, ಈರಪ್ಪ ಹಂಚಿನಾಳ, ಸಿದ್ದಪ್ಪ ಹಿರೆಭಾಶೆಟ್ಟಿ, ಸಂಗಮೇಶ ಬಿರಾದಾರ, ಜಗು ನಾಯ್ಕಡಿ, ಗಂಗಪ್ಪ ಹಂಚಿನಾಳ, ನಬಿಸಾಬ ನದಾ, ಕುಮಾರ ದೇಸಾಯಿ, ಶ್ರೀಶೈಲ ದೇಸಾಯಿ ಇತರರಿದ್ದರು.