

ಬ್ಯಾಡಗಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಮಹಿಳಾ ಹೋರಾಟಗಾರ್ತಿ ಸ್ನೇಹ ಶಿರೂರು ನೆರವೇರಿಸಿದರು.
ಸಂಸ್ಥೆ ಪ್ರಾಂಶುಪಾಲ ಎನ್.ಡಿ.ಮಾಚೇನಹಳ್ಳಿ, ಮಂಜುನಾಥ ನಿಂಗನಗೌಡ್ರ, ಸಿದ್ದಲಿಂಗೇಶ್ವರ ಬಾರ್ಕಿ, ಆಶ್ವಿನಿ ಕ್ಯಾತನಗೌಡ್ರ, ಸಿದ್ದು ಬಾರ್ಕಿ, ಅವಿನಾಶ ಮೋತಿನ, ಕವಿತಾ ಬರದೂರಹಿರೇಮಠ ಇತರರಿದ್ದರು.