ನಾಗಮಂಗಲದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ 28 ವಿದ್ಯಾರ್ಥಿಗಳಿಗೆ ಕರೊನಾ ಪಾಸಿಟಿವ್​

corona
Published on

ಮಂಡ್ಯ: ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಸೆಪ್ಟೆಂಬರ್ 23ರಂದು ಓರ್ವ ವಿದ್ಯಾರ್ಥಿನಿಗೆ ಕರೊನಾ ಪಾಸಿಟಿವ್​ ಬಂದಿತ್ತು. ಕಾಲೇಜಿನಲ್ಲಿ 412 ವಿದ್ಯಾರ್ಥಿನಿಯರಿದ್ದಾರೆ. ಈ ಪೈಕಿ 372 ಮಂದಿಗೆ ಕರೊನಾ ಟೆಸ್ಟ್​ ಮಾಡಲಾಗಿದ್ದು, 27 ಮಂದಿಗೆ ಸೋಂಕು ದೃಢಪಟ್ಟಿದೆ. ಮೊದಲು ಸೋಂಕಿ ಕಾಣಿಸಿಕೊಂಡ ವಿದ್ಯಾರ್ಥಿನಿ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ಮಂದಿಗೂ ಕರೊನಾ ಪಾಸಿಟಿವ್ ಬಂದಿದೆ.

ಸೋಂಕಿತರೆಲ್ಲರನ್ನೂ ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜನ್ನು ತಾಲೂಕು ಆಡಳಿತ ಒಂದು ವಾರ ಸೀಲ್ ಡೌನ್ ಮಾಡಿದೆ.

ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್ ಅವರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ರೋಗ ಲಕ್ಷಣಗಳ ಬಗ್ಗೆ ಮಾಹಿತಿ ಕೇಳಿ ಕುಂದು-ಕೊರತೆ ಆಲಿಸಿದರು. ಏನಾದರೂ ಸಮಸ್ಯೆ ನನಗೇ ಫೋನ್ ಮಾಡಿ ಎಂದು ಆತ್ಮಸ್ಥೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net