ರಾಜ್ಯದಲ್ಲಿ ಒಂದೇ ದಿನ 1,692 ಮಂದಿಗೆ ಕರೊನಾ ಸೋಂಕು ದೃಢ

Corona
ಜಮ್ಮುವಿನಲ್ಲಿ ಸಂಗ್ರಹಿಸಿದ ಸ್ವಾಬ್ ಸ್ಯಾಂಪಲ್​ಗಳನ್ನು ಲ್ಯಾಬ್​ಗೆ ಒಯ್ಯುತ್ತಿರುವ ಆರೋಗ್ಯ ಸಿಬ್ಬಂದಿ
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ಭಾನುವಾರ 1,692 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸಕ್ರಿಯ ಕೇಸ್‌ಗಳ ಸಂಖ್ಯೆ 11 ಸಾವಿರ ಗಡಿ ದಾಟಿದೆ.

ತುಮಕೂರಿನಲ್ಲಿ 55 ವರ್ಷದ ಪುರುಷ ಮತ್ತು ಶಿವಮೊಗ್ಗದಲ್ಲಿ 63 ವೃದ್ಧ ಸೋಂಕಿನ ತೀವ್ರತೆಯಿಂದ ಸಾವಿಗೀಡಾಗಿದ್ದು, ಒಟ್ಟು ಮೃತರ ಸಂಖ್ಯೆ 40,104ಕ್ಕೆ ಏರಿಕೆಯಾಗಿವೆ. 1,094 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಬೆಂಗಳೂರು ನಗರ- 1154, ಧಾರವಾಡ-73, ಹಾಸನ-48, ಮೈಸೂರು- 47, ಬೆಳಗಾವಿ- 41, ಕಲಬುರಗಿ- 31, ಉತ್ತರ ಕನ್ನಡ- 26, ತುಮಕೂರು- 26 ಕೇಸ್‌ಗಳು ದಾಖಲಾಗಿವೆ. 19 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿದರೆ, 9 ಜಿಲ್ಲೆಗಳಲ್ಲಿ ಒಂದಂಕಿ ಇವೆ. 2 ಜಿಲ್ಲೆಗಳಲ್ಲಿ ಶೂನ್ಯ ಕೇಸ್‌ಗಳಿವೆ. ಬೆಂಗಳೂರಿನಲ್ಲಿ ಪ್ರತಿ ನಿತ್ಯ ಸಾವಿರಕ್ಕಿಂತ ಹೆಚ್ಚು ಕೇಸ್ ವರದಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net