

ತೇರದಾಳ: ಪಟ್ಟಣದ ಜಮಖಂಡಿ-ಕಾಗವಾಡ ರಾಜ್ಯಹೆದ್ದಾರಿ ಬಳಿಯ ಮಹಾತ್ಮಗಾಂಧಿ ಕ್ರೀಡಾಂಗಣದ ಪಕ್ಕದಲ್ಲಿನ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದ ಬಳ್ಳಿಯೊಂದು ವಿದ್ಯುತ್ ತಂತಿಗೆ ಆವರಿಸುವ ಮೂಲಕ ಅನಾಹುತಕ್ಕೆ ಆಹ್ವಾನಿಸುತ್ತಿದೆ.
ಇತ್ತಿಚೆಗಷ್ಟೆ ಸ್ಥಳೀಯ ದಾಸರಮಡ್ಡಿಯಲ್ಲಿ ವಿದ್ಯುತ್ ಅವಘಡವಾಗಿ ಜೀವಹಾನಿಗೊಳಗಾದ ಘಟನೆ ನಡೆದರೂ ಹೆಸ್ಕಾಂ ಸೇರಿ ಸುರಕ್ಷತೆ ವಹಿಸಬೇಕಿರುವ ಯಾವುದೇ ಅಧಿಕಾರಿಗಳು ಇತ್ತಕಡೆ ಗಮನಹರಿಸದಿರುವುದು ವಿಪರ್ಯಾಸವೇ ಸರಿ.
ಪಟ್ಟಣದ ಕೆಲವಡೆ ಇಂಥ ಬಳ್ಳಿಗಳು ನಿಂತು ವಿದ್ಯುತ್ ತಂತಿ ಸ್ಪರ್ಶಿಸಿ ಅವಘಟಕ್ಕೆ ಆಹ್ವಾನಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.