ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಬ್ಯಾಂಕ್ ಬೆನ್ನೆಲುಬು

12 SVR 2
Published on

ಸವಣೂರ: ಸಹಕಾರಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿವೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಸವೂರ ಹೇಳಿದರು.

ಪಟ್ಟಣದ ದಿ. ಸವಣೂರು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮತ್ತು ವಸೂಲಾತಿಯಲ್ಲಿ ನಮ್ಮ ಬ್ಯಾಂಕ್ ಶೇ. 90ರಷ್ಟು ಸಾಧನೆಗೈದು ಜಿಲ್ಲೆಗೆ ಸತತ ಎರಡನೇ ಸ್ಥಾನ ಪಡೆದಿದೆ. ಬ್ಯಾಂಕಿನ ಪ್ರಗತಿಗೆ ರೈತರು, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಸಹಕಾರವೇ ಕಾರಣ ಎಂದರು.

ಉಪಾಧ್ಯಕ್ಷೆ ಮಹಾದೇವಕ್ಕ ಜಕ್ಕಣ್ಣನವರ, ನಿರ್ದೇಶಕ ಬಿ.ಎಸ್. ಕೊಪ್ಪದ, ಸಂತೋಷ ಗುಡಿಸಾಗರ, ಶ್ರೀಪಾದಗೌಡ ಪಾಟೀಲ, ಆನಂದಪ್ಪ ಅಕ್ಕೂರ, ಎನ್.ಡಿ. ಬಿರಾದಾರ, ಸಿ.ಸಿ. ಅಂಗಡಿ, ಮಂಜುನಾಥ ದೊಡ್ಡಮನಿ, ಮಂಜುನಾಥ ಹೊಸಳ್ಳಿ, ವಿ.ಬಿ. ಪಟ್ಟಣಶೆಟ್ಟಿ, ಕೆ.ಆರ್. ಬಿಕ್ಕಿಮಟ್ಟಿ, ಬಿ.ಎಂ. ಪಾಟೀಲ, ನಾಗರತ್ನಾ ಗಡೆಪ್ಪನವರ, ಬ್ಯಾಂಕ್ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಂ. ಪಾಟೀಲ, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net